ಮಲ್ಪೆ: ಹೆಡ್‌ಕಾನ್ಸ್ಟೇಬಲ್ ಸಂತೋಷ್ ಶೆಟ್ಟಿ ಅವರ ಅಧ್ಯಯನ ಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ
ಉಡುಪಿ: ಪ್ರಸ್ತುತ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯಲ್ಲಿ ವಾಹನ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್‌ಕಾನ್ಸ್ಟೇಬಲ್ ಸಂತೋಷ್ ಶೆಟ್ಟಿ ಇವರು ಮಂಡಿಸಿದ ಮೈಸೂರು ಒಡೆಯರ ಕಾಲದಲ್ಲಿ ಪೊಲೀಸ್ ವ್ಯವಸ್ಥೆ-ಒಂದು ಅಧ್ಯಯನ ಎಂಬ ಪ್ರಬಂಧಕ್ಕೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ ಪದವಿ ನೀಡಿದ್ದು, ಇತ್ತೀಚೆಗೆ ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಕೇಂದ್ರ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇವರಿಂದ ಪ್ರಶಸ್ತಿ ಪತ್ರ ಹಾಗೂ ನಗದು ಪುರಸ್ಕಾರ ಪಡೆದಿರುತ್ತಾರೆ.