ಆರೋಪ ಮುಕ್ತಗೊಂಡು ಎರಡು ವರ್ಷದ ಬಳಿಕ‌ ತಾಯ್ನಾಡಿಗೆ ಮರಳಿದ ಹರೀಶ್‌ ಬಂಗೇರ.!

ಉಡುಪಿ: ಸೌದಿ ಅರೇಬಿಯಾದ ದೊರೆಯ ವಿರುದ್ಧ ಪೋಸ್ಟ್‌ ಮಾಡಲಾಗಿದೆ ಎಂಬ ಆರೋಪದಡಿ ಸೌದಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕುಂದಾಪುರದ ಬೀಜಾಡಿಯ ಹರೀಶ್‌ ಬಂಗೇರ ಅವರು ಎರಡು ವರ್ಷದ ಬಳಿಕ ಆರೋಪ ಮುಕ್ತಗೊಂಡು ತಾಯ್ನಾಡಿಗೆ ಮರಳಿದ್ದಾರೆ. ಹರೀಶ್ ಬಂಗೇರ ಇಂದು ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಸ್ನೇಹಿತರು ಹಾಗೂ ಕುಟುಂಬಸ್ಥರು ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಏನಿದು ಪ್ರಕರಣ?: ಹರೀಶ್‌ ಬಂಗೇರ ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ […]