ಕೋಟ: ಉದ್ಯಮಿ ಹರಿದಾಸ್ ಭಟ್ ನಿಧನ
ಕೋಟ: ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ನಿವಾಸಿ ಉದ್ಯಮಿ ಹರಿದಾಸ್ ಭಟ್ (60) ಅಸೌಖ್ಯದಿಂದ ಭಾನುವಾರದಂದು ನಿಧನ ಹೊಂದಿದ್ದಾರೆ. ಇವರು ಗೇರು ಉದ್ಯಮಿಯಾಗಿದ್ದರು ಹಾಗೂ ಹಳ್ಳಾಡಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ, ಜೈ ಗಣೇಶ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ, ಜಿ.ಎಸ್.ಬಿ.ಸೇವಾ ಸಂಘ ಶಿರಿಯಾರದ ಪದಾಧಿಕಾರಿಯಾಗಿ, ಹವ್ಯಾಸಿ ಯಕ್ಷಗಾನ ತಾಳಮದ್ದಲೆಕಾರರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.