ಜಗತ್ತಿಗೆ ಗುರುವಾದ ಜಗದೊಡೆಯನ ಜನುಮ ದಿನದ ಶುಭಾಶಯಗಳು

ಈ ಜಗತ್ತಿನಲ್ಲಿ ಕೃಷ್ಣ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವ ಸ್ಥಳಗಳು, ಮೊದಲನೆಯದ್ದು ಮಥುರಾ, ಎರಡನೆಯದ್ದು ದ್ವಾರಕ, ಮೂರನೆಯದ್ದು ನಮ್ಮ ತುಳುನಾಡಿನ ಒಡಿಪು(ಉಡುಪಿ). ಗೋಕುಲ- ಮಥುರಾದಲ್ಲಿ ಹುಟ್ಟಿ ಬೆಳೆದ ಕೃಷ್ಣ ಮುಂದೆ ದ್ವಾರಕೆಯನ್ನು ತನ್ನ ಕರ್ಮ ಭೂಮಿಯನ್ನಾಗಿಸಿದ. ಮಥುರಾದ ಜನ್ಮ ಭೂಮಿಯಿಂದ, ದ್ವಾರಕೆಯ ಕರ್ಮ ಭೂಮಿಗೆ ಅವಿನಾಭಾವ ಸಂಬಂಧ. ಅಂತೆಯೆ ನಮ್ಮ ಒಡಿಪು ಅಂದರೆ ಕೃಷ್ಣ, ಕೃಷ್ಣ ಅಂದರೆ ಒಡಿಪು! ಕಲಿಯುಗ ವ್ಯಾಸರೆಂದೆ ಖ್ಯಾತಿವೆತ್ತ ಮಧ್ವಾಚಾರ್ಯರ ದಯದಿಂದ, ಬಹುಶಃ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ಇಂದಿನ ಉಡುಪಿಗೂ ಕೃಷ್ಣನ […]