ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 187 ನಾಣ್ಯಗಳು: ತಬ್ಬಿಬ್ಬಾದ ವೈದ್ಯರು

ಬಾಗಲಕೋಟೆ: ಇಲ್ಲಿ ವ್ಯಕ್ತಿಯೊಬ್ಬರು ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಆತನ ಹೊಟ್ಟೆಯೊಳಗೆ ನಾಣ್ಯಗಳನ್ನು ಕಂಡು ವೈದ್ಯರು ತಬ್ಬಿಬ್ಬಾಗಿದ್ದಾರೆ. ಹಾನಗಲ್ ನ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ವ್ಯಕ್ತಿಯ ಹೊಟ್ಟೆ ನೋವು ಮತ್ತು ವಾಂತಿಗೆ ಕಾರಣವಾಗುವ ಸಮಸ್ಯೆ ಏನೆಂಬುದನ್ನು ಹುಡುಕುತ್ತಿದ್ದಾಗ ಆತನ ಹೊಟ್ಟೆಯಲ್ಲಿ ನಾಣ್ಯಗಳಿರುವುದು ಪತ್ತೆಯಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈತ ಕಳೆದ 2-3 ತಿಂಗಳಿಂದ ನಾಣ್ಯಗಳನ್ನು ನುಂಗುತ್ತಿದ್ದ. ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ […]