ಜ್ಞಾನವಾಪಿ ಪ್ರಕರಣ: ಅಸ್ತಿತ್ವದಲ್ಲಿರುವ ಕಟ್ಟಡ ನಿರ್ಮಾಣದ ಮೊದಲು ದೊಡ್ಡ ಹಿಂದೂ ದೇವಾಲಯವಿತ್ತೆಂದ ಎ.ಎಸ್.ಐ ವರದಿ
ವಾರಣಾಸಿ: ಜ್ಞಾನವಾಪಿ ಪ್ರಕರಣದಲ್ಲಿ, ಅಸ್ತಿತ್ವದಲ್ಲಿರುವ ಕಟ್ಟಡವನ್ನು ನಿರ್ಮಿಸುವ ಮೊದಲಿಗೂ ಅಲ್ಲೊಂದು ದೊಡ್ಡ ಹಿಂದೂ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಇಲಾಖೆಯ ಸರ್ವೆಯ ವರದಿ ತಿಳಿಸಿದೆ ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಪುರಾತತ್ವ ಇಲಾಖೆಯ ಸಮೀಕ್ಷೆಯು ಶಿವಲಿಂಗ-ಕಾರಂಜಿ ಚರ್ಚೆಗೆ ಪೂರ್ಣವಿರಾಮ ನೀಡಲಿದೆ ಎಂದು ಹಿಂದೂ ಅರ್ಜಿದಾರರ ಪಕ್ಷವನ್ನು ಪ್ರತಿನಿಧಿಸುವ ವಕೀಲರು ಹೇಳಿದ್ದಾರೆ. ವಾರಣಾಸಿ ನ್ಯಾಯಾಲಯವು ಈ ವಾರದ ಆರಂಭದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಮತ್ತು ಎರಡೂ ಕಡೆಯವರಿಗೆ ಅದರ ಪ್ರತಿಗಳನ್ನು […]