ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ಪದಗ್ರಹಣ

ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಮಾ. 30 ರಂದು ಕಾಪು K1 ಹೋಟೆಲಿನಲ್ಲಿ ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ದಾಖಲೆಗಳ ಮತಗಳ ಅಂತರದಲ್ಲಿ ಗೆಲ್ಲಿಸಲು ಕರೆನೀಡಿದರು.

ಕಾಪು ಸಮುದ್ರತೀರದಲ್ಲಿ ‘ಆನಂದ ಲಹರಿ’: ರವಿಶಂಕರ್ ಗುರೂಜಿ ಸತ್ಸಂಗದಲ್ಲಿ ಪುಳಕಗೊಂಡ ಭಕ್ತರು

ಕಾಪು: ಆರ್ಟ್ ಆಫ್ ಲಿವಿಂಗ್‌ (Art Of Living) ಸಂಸ್ಥಾಪಕ ರವಿಶಂಕರ್ ಗುರೂಜಿ (Ravishanakar Guruji) ಮಂಗಳವಾರದಂದು ಇಲ್ಲಿನ ಸಮುದ್ರ ತೀರದಲ್ಲಿ ‘ಆನಂದ ಲಹರಿ’ ಮಹಾಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು. ರವಿಶಂಕರ್ ಗುರೂಜಿ ಅವರು ವೇದಿಕೆ ಮೇಲೆರುತ್ತಿದ್ದಂತೆಯೇ ನೆರೆದವರು ಜಯ ಘೋಷ ಮೊಳಗಿಸಿದರು. ಪಾಲ್ಗೊಂಡ ಸಹಸ್ರಾರು ಜನರಿಗೆ ಬೆಲ್ಲದ ಶೀರ, ಅವಲಕ್ಕಿ- ಕಡಲೆಯುಕ್ತ ವಿಶೇಷ ಪ್ರಸಾದ ವಿತರಿಸಲಾಯಿತು. ಜನಸಾಗರದ ನಡುವೆ ವೇದಿಕೆಯಲ್ಲಿ ಸಂಚರಿಸಿದ ರವಿಶಂಕರ್ ಗುರೂಜಿ ಅವರು ಜನರ ಭಕ್ತಿ ಭಾವದ ಗೌರವ ಪಡೆದುಕೊಂಡು ಹಾರೈಸಿ, ಪುಷ್ಪದಳ ಪ್ರಸಾದವಾಗಿ […]

ಕಾಪು: ಫೆ. 20ರಂದು ರವಿಶಂಕರ್ ಗುರೂಜಿ ಅವರಿಂದ ಆನಂದ ಲಹರಿ ಮಹಾ ಸತ್ಸಂಗ

ಕಾಪು: ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲಿವಿಂಗ್‌ನ (Art Of Living) ಸಂಸ್ಥಾಪಕ  ರವಿಶಂಕರ್ ಗುರೂಜಿ (Ravi Shankar Guruji) ಅವರಿಂದ ಕಾಪು ಸಮುದ್ರ ಕಿನಾರೆಯ ಮಂಥನ್ ರೆಸಾರ್ಟ್ ಬಳಿ ಆನಂದ ಲಹರಿ ಮಹಾ ಸತ್ಸಂಗ ಫೆ. 20ರಂದು ಸಂಜೆ 4.30 ರಿಂದ 8 ರ ವರೆಗೆ ನಡೆಯಲಿದೆ ಎಂದು ಆಯೋಜಕ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮನುಷ್ಯನ ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಸಫಲವಾಗಿರುವ ಜೀವನ ಕಲೆ ಹಾಗೂ ಸುದರ್ಶನ […]

ಬಿಜೆಪಿ ಯುವ ಮೋರ್ಚಾ ಕಾಪು ಮಂಡಲ ವತಿಯಿಂದ ‘2024 ಮೋದಿ ಮತ್ತೊಮ್ಮೆ’ ಗೋಡೆ ಬರಹ ಬರೆದ ಗುರ್ಮೆ ಸುರೇಶ್ ಶೆಟ್ಟಿ

ಕಾಪು: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾಪು ಮಂಡಲ ವತಿಯಿಂದ ಶನಿವಾರದಂದು ಕಾಪು ಮಂಡಲ ಬಿಜೆಪಿ ಕಚೇರಿ ಬಳಿ ಆಯೋಜಿಸಲಾದ “2024 ಮೋದಿ ಮತ್ತೊಮ್ಮೆ” ಗೋಡೆ ಬರಹಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿ ಜಗತ್ತು ಕಂಡ ಶ್ರೇಷ್ಠ ನಾಯಕ ನರೇಂದ್ರ ಮೋದಿ. ಭಾರತವನ್ನು ವಿಶ್ವಗುರುವನ್ನಾಗಿಸಲು ಹೊರಟ ನಾಯಕನನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಲು ಇಡೀ ವಿಶ್ವವೇ ಕಾಯುತ್ತಿದೆ ಎಂದರು. ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾಪು ಮಂಡಲ ಯುವಮೋರ್ಚಾ […]

ಮಣಿಪಾಲ: 80 ಬಡಗಬೆಟ್ಟು- ಅಲೆವೂರು ಮುಖ್ಯರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಮಣಿಪಾಲ: ಮಣಿಪಾಲ- 80 ಬಡಗಬೆಟ್ಟು- ಅಲೆವೂರು ಮುಖ್ಯರಸ್ತೆಯು ಸುಮಾರು 8 ಕೋಟಿ 16 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು ಗುರುವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಗುಣಮಟ್ಟವನ್ನು ಕಾಯ್ದುಕೊಂಡು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್, ಉಪಾಧ್ಯಕ್ಷೆ ರೂಪಾ ನಾಯಕ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಹಾಗೂ ಲೋಕೋಪಯೋಗಿ […]