ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂಎಸ್ ಸ್ವಾಮಿನಾಥನ್ ವಿಧಿವಶ

ಚೆನ್ನೈ: ಭಾರತದ ಹಸಿರು ಕ್ರಾಂತಿಯ ಪಿತಾಮಹನೆಂದು ಖ್ಯಾತಿವೆತ್ತ ಮಂಕೊಂಬು ಸಾಂಬಶಿವನ್ ಸ್ವಾಮಿನಾಥನ್ (98) ಅವರು ಗುರುವಾರ ಚೆನ್ನೈನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಸುಮಾರು ಅರ್ಧ ಶತಮಾನದ ವೃತ್ತಿಜೀವನದಲ್ಲಿ ಅವರ ಮಾರ್ಗದರ್ಶನದಲ್ಲಿ ಕೃಷಿ ವಿಜ್ಞಾನಿಗಳು ಭಾರತದ ಲಕ್ಷಾಂತರ ಜನರನ್ನು ಮಾರಣಾಂತಿಕ ಕ್ಷಾಮದಿಂದ ರಕ್ಷಿಸಿದ್ದಾರೆ. 1987 ರಲ್ಲಿ ವಿಶ್ವ ಆಹಾರ ಪ್ರಶಸ್ತಿ ವಿಜೇತರಾದ ಸ್ವಾಮಿನಾಥನ್ ಅವರ ನಿಧನಕ್ಕೆ ದೇಶ ಮತ್ತು ವಿದೇಶಗಳಲ್ಲಿ ವ್ಯಾಪಕ ಶೋಕ ವ್ಯಕ್ತವಾಗಿದೆ. 1950 ರ ದಶಕದಲ್ಲಿ ಬಡತನದಿಂದ ಬಳಲುತ್ತಿರುವ ಮೆಕ್ಸಿಕೋಕ್ಕಾಗಿ ಬೋರ್ಲಾಗ್ ಅಭಿವೃದ್ಧಿಪಡಿಸಿದ ಹೆಚ್ಚಿನ ಇಳುವರಿ […]