50,000 ವರ್ಷಗಳ ನಂತರ ಭೂಮಿಗೆ ಭೇಟಿ ನೀಡಿದ ಹಸಿರು ಬಣ್ಣದ ಧೂಮಕೇತು
ಕಾಮೆಟ್ C/2022 E3 (ZTF) ಅಥವಾ ಹಸಿರು ಬಣ್ಣದ ಧೂಮಕೇತುವು ರಾತ್ರಿ ಆಗಸದಲ್ಲಿ ಬುಧವಾರದಂದು ಕಂಡುಬಂದಿದೆ. ಅಮೇರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಪ್ರಕಾರ, ಧೂಮಕೇತು ಸುಮಾರು 50,000 ವರ್ಷಗಳ ನಂತರ ನಮ್ಮ ಗ್ರಹಕ್ಕೆ ಭೇಟಿ ನೀಡಿದೆ. ಪ್ರಪಂಚದಾದ್ಯಂತದ ನಕ್ಷತ್ರ ವೀಕ್ಷಕರು ಮತ್ತು ಖಗೋಳಶಾಸ್ತ್ರಜ್ಞರು ಧೂಮಕೇತುವನ್ನು ವೀಕ್ಷಿಸಿ ಸಂತಸ ಪಟ್ಟಿದ್ದಾರೆ. ಧೂಮಕೇತುವು ಭೂಮಿಯಿಂದ ಕೇವಲ 26 ಮಿಲಿಯನ್ ಮೈಲುಗಳಷ್ಟು (ಅಥವಾ 42 ಮಿಲಿಯನ್ ಕಿಲೋಮೀಟರ್) ದೂರದಿಂದ ಹಾದುಹೋಗಿದೆ. ಕಳೆದ ಕೆಲವು ತಿಂಗಳಿನಿಂದ ಈ ಹಸಿರು ಧೂಮಕೇತು ಆಕಾಶದಲ್ಲಿದ್ದರೂ ಬುಧವಾರದಂದು […]