ಎಕ್ಸ್‌ಪರ್ಟ್ ಪಿಯು ಕಾಲೇಜು ವಳಚ್ಚಿಲ್‌ ಕ್ಯಾಂಪಸ್‌ಗೆ ಗ್ರೀನ್ ಅವಾರ್ಡ್

ಮಂಗಳೂರು: ಜಿಐಬಿ ಇಂಡಿಯಾ ನೀಡುವ ಗ್ರೀನ್ ಅವಾರ್ಡ್ ಅನ್ನು ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್ ಪಡೆದುಕೊಂಡಿದೆ. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹಾಗೂ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್.ನಾಯಕ್ ಅವರು ಪುರಸ್ಕಾರವನ್ನು ಪಡೆದುಕೊಂಡರು. ಪ್ರಶಸ್ತಿಗಾಗಿ ವಿಶ್ವದ ನಾನಾ ಭಾಗದ 1000ಕ್ಕೂ ಅಧಿಕ ಸಂಸ್ಥೆಗಳು ನಾಮನಿರ್ದೇಶನಗೊಂಡಿದ್ದವು. ಪರಿಣಿತ ತೀರ್ಪುಗಾರರ ತಂಡವು ಸಮಗ್ರ ಅಧ್ಯಯನ ನಡೆಸಿ ಅಂತಿಮ ಹಂತದಲ್ಲಿ 20 ಸಂಸ್ಥೆಗಳಿಗೆ ಗ್ರೀನ್ ಪುರಸ್ಕಾರ ನೀಡಿ ಗೌರವಿಸಿದೆ. ಇದರಲ್ಲಿ […]