ನವೆಂಬರ್ 1ರಿಂದ ಪದವಿ ಕಾಲೇಜುಗಳ ತರಗತಿ ಆರಂಭ: ಯುಜಿಸಿಯಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ
ನವದೆಹಲಿ: ನವೆಂಬರ್ 1ರಿಂದ ಪದವಿ ಕಾಲೇಜುಗಳ ಮೊದಲ ಸೆಮಿಸ್ಟರ್ ತರಗತಿಗಳು ಆರಂಭವಾಗಲಿವೆ. ಯುಜಿಸಿಯ ಪರಿಷ್ಕೃತ ಮಾರ್ಗಸೂಚಿಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯ ಮಂಗಳವಾರ ಅಂಗೀಕರಿಸಿದೆ. ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್’ ವಿಶ್ವವಿದ್ಯಾಲಯಗಳ 2020-21ರ ಸಾಲಿನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಮೊದಲ ವರ್ಷದ ಶೈಕ್ಷಣಿಕ ವೇಳಾಪಟ್ಟಿಯ ಯುಜಿಸಿ ಮಾರ್ಗಸೂಚಿಗಳನ್ನು ಅನುಮೋದಿಸಿದೆ’ ಎಂದು ತಿಳಿಸಿದ್ದಾರೆ. ಒಂದು ವೇಳೆ ಪ್ರವೇಶ ರದ್ದತಿಯಾದರೆ ಶುಲ್ಕದ ಪೂರ್ಣ ಮರುಪಾವತಿ ಮಾಡಲಾಗುವುದು. ಲಾಕ್‌ಡೌನ್ ಸಂಬಂಧಿತ ಕಾರಣಗಳಿಂದಾಗಿ […]