ಅಕ್ಟೋಬರ್ 17 ರಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಷಿಪ್ ಮೇಳ
ಉಡುಪಿ: ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಅಕ್ಟೋಬರ್ 17 ರಂದು ಬೆಳಗ್ಗೆ 9.30 ಕ್ಕೆ ಮಣಿಪಾಲ ಪ್ರಗತಿನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಷಿಪ್ ಮೇಳ ನಡೆಯಲಿದೆ. ಅಪ್ರೆಂಟಿಷಿಪ್ ಮೇಳದಲ್ಲಿ ಭಾಗವಹಿಸಲು ಐ.ಟಿ.ಐ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳು https://www.apprenticeshipindia.gov.in/candidate- registration ನಲ್ಲಿ ಹಾಗೂ ನೋಂದಣಿಯಾಗುವ ಅಭ್ಯರ್ಥಿಗಳಿಗೆ ಅಪ್ರೆಂಟಿಶಿಪ್ ತರಬೇತಿ ನೀಡುವ ಕಂಪನಿ ಹಾಗೂ ಕೈಗಾರಿಕೆಗಳು https://www.apprenticeshipindia.gov.in/establishment-registrationನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮೇಳದಂದು ಸಂಸ್ಥೆಯಲ್ಲಿ ಶಿಶಿಕ್ಷು ನೋಂದಣಿ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ:9900329668, 9964247101, […]