ಸರ್ಕಾರಿ ನೌಕರರು ಜನರ ನಿರೀಕ್ಷೆಗೆ ಸ್ಪಂದಿಸಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು: ನಿವೃತ್ತ ಜಿಲ್ಲಾಧಿಕಾರಿ ಕಲ್ಪನಾ

ಉಡುಪಿ: ಜನರಿಂದ ಜನರಿಗೋಸ್ಕರ ಇರುವ ಸರ್ಕಾರ ಜನಸಾಮಾನ್ಯರನ್ನು ಕೇಂದ್ರವನ್ನಾಗಿಟ್ಟುಕೊಂಡು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಇವುಗಳನ್ನು ಅನುಷ್ಠಾನಗೊಳಿಸುವ ಕೆಲಸ ಕಾರ್ಯಾಂಗದ್ದಾಗಿದ್ದು, ಇದರ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿರುತ್ತದೆ. ಇದನ್ನು ಅರಿತು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಬಹುಪಾಲು ಜನರು ಸರ್ಕಾರದಿಂದ ಹೆಚ್ಚೇನೂ ನಿರೀಕ್ಷಿಸದೇ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುತ್ತಿರುತ್ತಾರೆ. ಸರ್ಕಾರದಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮಾತ್ರ ಅಪೇಕ್ಷಿಸುವ ಅವರ ನಿರೀಕ್ಷೆಗೆ ತಕ್ಕಂತೆ ನಾವು ಸ್ಪಂದಿಸಬೇಕು ಎಂದು ಉಡುಪಿ ಜಿಲ್ಲೆಯ ಪ್ರಥಮ ಜಿಲಾಧಿಕಾರಿ(ಈಗ ನಿವೃತ್ತ) ಕಲ್ಪನಾ ಹೇಳಿದರು. […]

ಪದವಿ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಉತ್ತಮ ಆಡಳಿತ ಮಾಸ (ಗುಡ್ ಗವರ್ನೆನ್ಸ್ ಮಂಥ್) 2022 ರ ಅಂಗವಾಗಿ ಡಿಸೆಂಬರ್ ಮಾಹೆಯಲ್ಲಿ ವಿಶೇಷ ಆನ್‌ಲೈನ್ ಉಪನ್ಯಾಸ, ತಜ್ಞ ಸಮಿತಿ ಚರ್ಚೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏರ್ಪಡಿಸಲಾಗಿದ್ದು, ಡಿಸೆಂಬರ್ 15 ರ ಒಳಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು 500 ಪದಗಳಿಗೆ ಮೀರದಂತೆ […]