ಭಾರತದ ಏಕೈಕ ರಾಜ್ಯದಲ್ಲಿದೆ ಅಪರೂಪದ ‘ಚಿನ್ನದ ಬಣ್ಣದ ಹುಲಿ’: ಅಪರೂಪದಲ್ಲಿ ಅಪರೂಪ ಚಿನ್ನದ ಹುಲಿಗಳ ದರ್ಶನ; ಚಿತ್ರ ಹಂಚಿಕೊಂಡ ಹಿಮಂತ ಬಿಸ್ವಾ ಶರ್ಮಾ
ಗುವಾಹಟಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬಂದ ಅಪರೂಪದ ಚಿನ್ನದ ಹುಲಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ವನ್ಯಜೀವಿ ಛಾಯಾಗ್ರಾಹಕ ಮಯೂರೇಶ್ ಹೆಂಡ್ರೆ ಅವರು ಈ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಕಾಜಿ 106-ಎಫ್ ಎಂದು ಕರೆಯಲ್ಪಡುವ ಈ ಅಪರೂಪದ ಹುಲಿಯನ್ನು ವೀಕ್ಷಿಸುವ ಅದೃಷ್ಟವನ್ನು ಹೊಂದಿದ್ದಾರೆ. ಅಸ್ಸಾಂನ ಹೃದಯಭಾಗದಲ್ಲಿ ನೆಲೆಸಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ಸ್ಟ್ರಾಬೆರಿ ಟೈಗರ್ ಅಥವಾ ಗೋಲ್ಡನ್ ಟ್ಯಾಬಿ ಟೈಗರ್ ಎಂದೂ ಕರೆಯಲ್ಪಡುತ್ತದೆ. ಅಪರೂಪದ ಚಿನ್ನದ […]