ನಿಟ್ಟೂರು ಪ್ರೌಢಶಾಲೆಯ 15 ಹಳೆವಿದ್ಯಾರ್ಥಿ ಶಿಕ್ಷಕರಿಗೆ ‘ಸುವರ್ಣ ಶಿಕ್ಷಕ ಪುರಸ್ಕಾರ’ ಪ್ರದಾನ
ಉಡುಪಿ: ನಿಟ್ಟೂರು ಪ್ರೌಢ ಶಾಲೆಯ ‘ಸುವರ್ಣ ಪರ್ವ’ ಆಚರಣೆಯ ಅಂಗವಾಗಿ 15 ಮಂದಿ ಶಾಲಾ ಹಳೆವಿದ್ಯಾರ್ಥಿ ಶಿಕ್ಷಕರುಗಳನ್ನು ‘ಸುವರ್ಣ ಶಿಕ್ಷಕ ಪುರಸ್ಕಾರ’ದೊಂದಿಗೆ ಸನ್ಮಾನಿಸಲಾಯಿತು. ಭಾನುವಾರ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್ ಅವರು ಶಿಕ್ಷಕರಿಗೆ ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು. ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಮಾತನಾಡಿ, ಬಾಲ್ಯದಲ್ಲಿ ಕಳೆದ ಶಾಲಾ ದಿನಗಳನ್ನು ಮೆಲುಕು ಹಾಕುವಾಗ ದೊರೆಯುವ ಆನಂದಕ್ಕೆ ಸರಿಸಮಾನವಾದುದು ಬೇರೆ ಇಲ್ಲ. ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದ ಹಳೆವಿದ್ಯಾರ್ಥಿಗಳನ್ನು […]