ಆಸ್ಟ್ರೇಲಿಯದ ಕಿಂಬರ್ಲಿಯಲ್ಲಿ 380 ಮಿಲಿಯನ್ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ ಪತ್ತೆ!

380 ಮಿಲಿಯನ್ ವರ್ಷ ಹಳೆಯ ಮೀನಿನ ಹೃದಯ ಇತ್ತೀಚೆಗಷ್ಟೇ ಆಸ್ಟ್ರೇಲಿಯದ ಕಿಂಬರ್ಲಿಯಲ್ಲಿನ ಬಂಡೆಯ ರಚನೆಯಿಂದ ಪಡೆಯಲಾಗಿದೆ. ಇದುವರೆಗೆ ಕಂಡುಬಂದಿರುವ ಅತ್ಯಂತ ಹಳೆಯ ಪಳೆಯುಳಿಕೆ ಇದಾಗಿದೆ ಎಂದು ದ ವೆಥರ್ ಚಾನೆಲ್ ಇಂಡಿಯಾ ವರದಿ ಮಾಡಿದೆ. ಈ ಹೃದಯವು ಆರ್ತ್ರೋಡೈರ್ಸ್ ಅಥವಾ ಗೊಗೊ ಮೀನು ಎಂದು ಕರೆಯಲ್ಪಡುವ ಶಸ್ತ್ರಸಜ್ಜಿತ ದವಡೆಯ ಮೀನುಗಳ ವರ್ಗಕ್ಕೆ ಸೇರಿದೆ. ಆದರೆ ಅದಕ್ಕಿಂತಲೂ ವಿಸ್ಮಯಕಾರಿ ಸಂಗತಿಯೆಂದರೆ ಪಳೆಯುಳಿಕೆಯು ಚಪ್ಪಟೆಯಾಗಿರದೆ ಅಪರೂಪದ ಮೂರು ಆಯಾಮಗಳಲ್ಲಿ ಸಂರಕ್ಷಿಸಲ್ಪಟ್ಟಿರುವುದು ಕಂಡುಬಂದಿದೆ. ಹೃದಯದ ಪಕ್ಕದಲ್ಲಿ ಪಳೆಯುಳಿಕೆಗೊಂಡ ಹೊಟ್ಟೆ, ಕರುಳು ಮತ್ತು […]