ಶೇ. 80ರಷ್ಟು ಗ್ರಾಪಂ ಗೆಲ್ಲುವ ಗುರಿ ಹೊಂದಲಾಗಿದೆ: ಕಟೀಲ್

ಉಡುಪಿ: ಈ ಬಾರಿ ಶೇ. 80ರಷ್ಟು ಗ್ರಾಂ ಪಂಚಾಯತ್ ಗಳನ್ನು ಗೆಲ್ಲುವ ಗುರಿ ಹೊಂದಲಾಗಿದ್ದು, ಆ ನಿಟ್ಟಿನಲ್ಲಿ ಗ್ರಾಪಂ ಚುನಾವಣೆಗೆ ಪೂರ್ವತಯಾರಿ ಆಗಿ ಜಿಲ್ಲೆಗೆ ತಲಾ ಎರಡರಂತೆ ಒಟ್ಟು 62 ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಸ್ವರಾಜ್ಯ ಸಮಾವೇಶಕ್ಕಾಗಿ ರಾಜ್ಯದಲ್ಲಿ ಆರು ತಂಡಗಳನ್ನು ರಚನೆ ಮಾಡಲಾಗಿದೆ. ಒಂದೊಂದು ತಂಡಕ್ಕೆ ಐದು ಜಿಲ್ಲೆಗಳು ಬರುತ್ತವೆ. […]