ಶಾಲಾ ಶುಲ್ಕ ಇಳಿಸುವಂತೆ ಮನವಿ ಮಾಡಿದ ಪೋಷಕರಿಗೆ ಹೋಗಿ ಸಾಯಿರಿ ಎಂದ ಸಚಿವ
ಭೋಪಾಲ್: ಕೊರೊನಾ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲು ಮಾಡುತ್ತಿದೆ ಎಂಬ ಅಳಲು ತೋಡಿಕೊಂಡ ಪೋಷಕರಿಗೆ ಮಧ್ಯಪ್ರದೇಶ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ‘ನೀವು ಹೋಗಿ ಸಾಯಿರಿ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಇತ್ತೀಚೆಗಷ್ಟೇ ಸುಮಾರು 90-100 ವಿದ್ಯಾರ್ಥಿಗಳ ಪೋಷಕರು ಸಚಿವರ ನಿವಾಸಕ್ಕೆ ಭೇಟಿ ನೀಡಿದ್ದರು. ಹೆಚ್ಚುವರಿ ಶುಲ್ಕ ವಿಧಿಸಬಾರದೆಂಬ ಹೈಕೋರ್ಟ್ ಆದೇಶಗಳನ್ನು ಗಾಳಿಗೆ ತೂರಿ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ. ಈ ಸಂಬಂಧ ಶಿಕ್ಷಣ […]