ಮುಖದಲ್ಲಿ ಮೊಡವೆ ಆಗಿದೆಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ
ಪುತ್ತೂರು: ಮುಖದಲ್ಲಿ ಮೊಡವೆ ಆಗಿದೆಂಬ ಕಾರಣಕ್ಕೆ ಬಾಲಕಿಯೊಬ್ಬಳು ಮನೆಯ ಸಮೀಪದ ಗೇರು ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಕೆಯ್ಯೂರಿನ ದಿವ್ಯಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ದಿವ್ಯಾ ಮುಖದಲ್ಲಿ ಮೊಡವೆ ಆಗಿದ್ದು, ಇದರಿಂದ ಸಾಕಷ್ಟು ಮನನೊಂದಿದ್ದಳು. ಈ ಕಾರಣಕ್ಕಾಗಿ ದಿವ್ಯಾ ಎಲ್ಲಿಗೂ ಹೋಗುತ್ತಿರಲಿಲ್ಲ. ಸಂಬಂಧಿಕರ ಮನೆಗೂ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಶಾಲೆ ಕೂಡ ಆರಂಭ ಆಗಿದ್ದರಿಂದ ಮೊಡವೆಯ ಮುಖವನ್ನು ಹಿಡಿದುಕೊಂಡು ಹೇಗೆ ಶಾಲೆಗೆ ಹೋಗಲಿ ಎಂಬ ಚಿಂತೆಯೂ ಆಕೆಯನ್ನು ಕಾಡಿತ್ತು. ಇದರಿಂದ ಸಾಕಷ್ಟು ಕುಗ್ಗಿ ಹೋಗಿದ್ದಳು ಎಂದು […]