ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗಿರೀಶ್ ಅಂಚನ್ ಆಯ್ಕೆ
ಉಡುಪಿ: ನಗರಸಭೆಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಕುಂಜಿಬೆಟ್ಟು ವಾರ್ಡ್ ನಗರಸಭಾ ಸದಸ್ಯ ಗಿರೀಶ್ ಎಂ. ಅಂಚನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಗರಸಭೆಯಲ್ಲಿ ನಡೆದ ಸ್ಥಾಯಿ ಸಮಿತಿ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ಸ್ಥಾಯಿ ಸಮಿತಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಟಿ ಜಿ ಹೆಗ್ಡೆ, ವಿಜಯಲಕ್ಷ್ಮಿ, ಚಂದ್ರಶೇಖರ್, ಯೋಗೀಶ್ ಸಾಲಿಯಾನ್, ಗೀತಾ ಶೇಟ್, ಅಶೋಕ್ ನಾಯ್ಕ, ಮಂಜುಳಾ ನಾಯ್ಕ, ವಿಜಯ ಪೂಜಾರಿ, ಶ್ರೀಶ […]