ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ: ಪಕ್ಷ ತೊರೆದ ಹಿರಿಯ ನಾಯಕ ಗುಲಾಂ ನಬಿ ಆಜಾದ್

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಬರೆದ ಐದು ಪುಟಗಳ ಪತ್ರದಲ್ಲಿ ಆಜಾದ್, ಕಾಂಗ್ರೆಸ್‌ ಪರಿಸ್ಥಿತಿ “ಹಿಂತಿರುಗಲಾಗುವುದಿಲ್ಲ” ಎಂಬ ಹಂತವನ್ನು ತಲುಪಿದೆ ಎಂದು ಹೇಳಿದ್ದಾರೆ. ಇಡೀ ಸಂಸ್ಥೆಯ ಆಯ್ಕೆ ಪ್ರಕ್ರಿಯೆಯು ಒಂದು ಪ್ರಹಸನ ಮತ್ತು ನೆಪವಾಗಿದೆ. ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಂಘಟನೆಯ ಮಟ್ಟದಲ್ಲಿ ಚುನಾವಣೆ ನಡೆದಿಲ್ಲ. 24 ಅಕ್ಬರ್ ರಸ್ತೆಯಲ್ಲಿ ಕುಳಿತು […]