2014 ರ ಮೊದಲಿನ ಆರ್ಥಿಕತೆಯ ದುರುಪಯೋಗದ ಬಗ್ಗೆ ಶ್ವೇತಪತ್ರ ಮಂಡನೆ; ಆದಾಯ ತೆರಿಗೆ ಯಥಾಸ್ಥಿತಿ, ಆವಾಸ್ ಯೋಜನೆ-ಆಯುಷ್ಮಾನ್ ಭಾರತ್ ವಿಸ್ತರಣೆ
ನವದೆಹಲಿ: ಆರನೇ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಆಳವಾದ ಪ್ರಸರಣವನ್ನು ಕಂಡಿದೆ. ಅತ್ಯದ್ಭುತ ಕೆಲಸದ ಆಧಾರದ ಮೇಲೆ, ನಮ್ಮ ಸರ್ಕಾರವು ಮತ್ತೊಮ್ಮೆ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು. ಹಿಂದಿನ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವೆ 2047 ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. 2014 ರ ಮೊದಲು ಆರ್ಥಿಕತೆಯ ದುರುಪಯೋಗದ ಬಗ್ಗೆ ಮೋದಿ ಸರ್ಕಾರವು ಸಂಸತ್ತಿನಲ್ಲಿ […]
ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ: 2023-24 ಆರ್ಥಿಕ ವರ್ಷಕ್ಕೆ ಜಿಡಿಪಿ 6.5 ಶೇಕಡಾ; 5.4 ಶೇ. ಹಣದುಬ್ಬರ
ನವದೆಹಲಿ: ಆರ್‌ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 6.5 ಪ್ರತಿಶತದಲ್ಲಿ ಯಥಾಸ್ಥಿತಿಯಲ್ಲಿಡಲು ಸರ್ವಾನುಮತದಿಂದ ನಿರ್ಧರಿಸಿದೆ. ಕೇಂದ್ರ ಬ್ಯಾಂಕ್ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿರಿಸಿರುವುದು ಇದು ಸತತ ನಾಲ್ಕನೇ ಬಾರಿಯಾಗಿದೆ. ಆರ್ಥಿಕ ವರ್ಷ 24ರ ಜಿಡಿಪಿ ಅಂದಾಜು 6.5 ಶೇಕಡಾದಲ್ಲಿ ಉಳಿಸಿಕೊಂಡಿರುವ ಆರ್.ಬಿ.ಐ 2023-24 ಕ್ಕೆ ಹಣದುಬ್ಬರ ಪ್ರಕ್ಷೇಪಣವನ್ನು 5.4 ಶೇಕಡಾದಲ್ಲಿ ಬದಲಾಯಿಸದೆ ಇರಿಸಿದೆ. ಶುಕ್ರವಾರ ಆರ್ಥಿಕ ವರ್ಷ 24 ರ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಸ್ತುತಪಡಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, “ನಮ್ಮ ವಿತ್ತೀಯ ನೀತಿಯು […]
ಸೇವಾವಲಯದಿಂದಾಗಿ ಚತುರ್ಥ ತ್ರೈಮಾಸಿಕದಲ್ಲಿ ಶೇ. 6.1 ಜಿಡಿಪಿ ದಾಖಲಿಸಿದ ಭಾರತ: ಪೂರ್ಣ ವರ್ಷದ ಬೆಳವಣಿಗೆ 7.2 ಶೇ ಸಾಧ್ಯತೆ
ನವದೆಹಲಿ: ಭಾರತದ ಒಟ್ಟು ದೇಶೀಯ ಉತ್ಪನ್ನ (GDP) 2023 ರ ಜನವರಿ-ಮಾರ್ಚ್‌ನಲ್ಲಿ ನಿರೀಕ್ಷಿತಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಅಂದರೆ 6.1 ಶೇಕಡಾ ಗಳಿಸಿದ್ದು ಇದು 2022-23 ರ ಪೂರ್ಣ ವರ್ಷದ ಬೆಳವಣಿಗೆಯ ಅಂದಾಜನ್ನು 7.2 ಶೇಕಡಾಕ್ಕೆ ತಳ್ಳಲಿದೆ ಎಂದು ಬುಧವಾರ ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಇದು 2022-23 ವರ್ಷಕ್ಕೆ ಕಚೇರಿಯ ಶೇ.7 ಬೆಳವಣಿಗೆ ದರದ ಮುಂಗಡ ಅಂದಾಜಿನ ಪ್ರತಿಶತಕ್ಕಿಂತ ಹೆಚ್ಚಾಗಿದೆ. ನಿರ್ಮಾಣ, ವ್ಯಾಪಾರ, ಹೋಟೆಲ್‌ಗಳು, ಸಾರಿಗೆ ವಲಯಗಳ ನೇತೃತ್ವದ ಸೇವಾ ವಲಯದ […]
ಮೊದಲನೆ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 13.5 ರಷ್ಟು ಬೆಳವಣಿಗೆ
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ (ಕ್ಯೂ1)ದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 13.5 ರಷ್ಟು ಬೆಳವಣಿಗೆಯಾಗಿದೆ. ಬುಧವಾರ ಬಿಡುಗಡೆಯಾದ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ತಾತ್ಕಾಲಿಕ ಅಂದಾಜಿನ ಪ್ರಕಾರ, 2022-23ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಕ್ಯೂ1)ದಲ್ಲಿ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯವು ಶೇಕಡಾ 4.5 ರಷ್ಟು ಏರಿಕೆಯಾಗಿದೆ. ಉತ್ಪಾದನಾ ವಲಯವು ಶೇಕಡಾ 4.8 ರಷ್ಟು ಮತ್ತು ನಿರ್ಮಾಣ ವಲಯವು ಶೇಕಡಾ 16.8 ರಷ್ಟು ಬೆಳವಣಿಗೆಯಾಗಿದೆ. ಪ್ರಸಾರಕ್ಕೆ ಸಂಬಂಧಿಸಿದ […]