ಜ.30ರಿಂದ ಫೆ.1ರವರೆಗೆ ಮಾಹೆಯಲ್ಲಿ ಅಮೃತ ಯುವ ಕಲೋತ್ಸವ-ಸಾಂಸ್ಕೃತಿಕ ಉತ್ಸವ
ಮಣಿಪಾಲ: ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಸಹಯೋಗದೊಂದಿಗೆ ಭಾರತದ 75ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಮೂರು ದಿನಗಳ ಯುವ ಸಾಂಸ್ಕೃತಿಕ ಉತ್ಸವ – ‘ಅಮೃತ ಯುವ ಕಲೋತ್ಸವ’ವನ್ನು ಜನವರಿ 30, 31 ಮತ್ತು ಫೆಬ್ರವರಿ 1ರಂದು ಮಣಿಪಾಲದಲ್ಲಿ ವಿಭಿನ್ನ ರೀತಿಯಲ್ಲಿ ಆಯೋಜಿಸುತ್ತಿದೆ. ಭಾರತದಾದ್ಯಂತ 75ನೇ ಸ್ವಾತಂತ್ರೋತ್ಸವದ ವರ್ಷಾಚರಣೆಯ ಸರಣಿಯಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಇದು ಆಯೋಜಿಸಲ್ಪಡುತ್ತಿದೆ. ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಡಾ ಸಂಧ್ಯಾ ಪುರೇಚ […]