ದ್ವಿತೀಯ ಪಿಯುಸಿ ಫಲಿತಾಂಶ, ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ; ವಿಜ್ಞಾನ ವಿಭಾಗದಲ್ಲಿ ಮೂವರು ತಲಾ 597 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ

ಕಾರ್ಕಳ/ಉಡುಪಿ/ಮಣಿಪಾಲ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ. ಒಟ್ಟು 966 ವಿದ್ಯಾರ್ಥಿಗಳಲ್ಲಿ 888 ವಿದ್ಯಾರ್ಥಿಗಳು (91.93%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಸಾಧನೆ ಮೆರೆದಿದ್ದಾರೆ. ಕಾರ್ಕಳ, ಉಡುಪಿ ಹಾಗೂ ಮಣಿಪಾಲ ಜ್ಞಾನಸುಧಾ ಕೇಂದ್ರಗಳು ಶೇ.100 ಫಲಿತಾಂಶವನ್ನು ಸಾಧಿಸಿವೆ. ರಾಜ್ಯ ಮಟ್ಟದ ಟಾಪ್ 10 ಸಾಧನೆ ರಾಜ್ಯ ಮಟ್ಟದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಜ್ಞಾನಸುಧಾದ 49 […]