ದ್ವಿತೀಯ ಪಿಯುಸಿ ಫಲಿತಾಂಶ, ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ; ವಿಜ್ಞಾನ ವಿಭಾಗದಲ್ಲಿ ಮೂವರು ತಲಾ 597 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ

ರಾಜ್ಯ ಮಟ್ಟದ ಟಾಪ್ 10 ಸಾಧನೆ

ರಾಜ್ಯ ಮಟ್ಟದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಜ್ಞಾನಸುಧಾದ 49 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾದ ಚೈತ್ರಿಕಾ ಚೌದರಿ, ವೈಷ್ಣವಿ ಕುಲಕರ್ಣಿ ಹಾಗೂ ಉಡುಪಿ ಜ್ಞಾನಸುಧಾದ ಆರ್ನವಿ ತಲಾ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.

ವಾಣಿಜ್ಯ ವಿಭಾಗದ ಸಾಧನೆ

ಕಾರ್ಕಳ ಜ್ಞಾನಸುಧಾದ ಸಾನ್ವಿ ದಿನೇಶ್ (595) 6ನೇ ರ‍್ಯಾಂಕ್, ಚಾನ್ವಿ (593) 8ನೇ ರ‍್ಯಾಂಕ್, ಪ್ರಥುಲ್ ಡಿ’ಸೋಜಾ (592) 9ನೇ ರ‍್ಯಾಂಕ್ ಹಾಗೂ ಮಣಿಪಾಲ ಜ್ಞಾನಸುಧಾದ ರಕ್ಷಿತ್ (592) ಮತ್ತು ಸಜನ್ (591) 10ನೇ ರ‍್ಯಾಂಕ್ ಪಡೆದಿದ್ದಾರೆ.

ಪರೀಕ್ಷೆ ಬರೆದ ಜ್ಞಾನಸುಧಾದ 79 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯವಾರು ಪೂರ್ಣಾಂಕ ಸಾಧನೆ

ಗಣಿತಶಾಸ್ತ್ರ – 292, ಜೀವಶಾಸ್ತ್ರ – 22, ರಸಾಯನಶಾಸ್ತ್ರ – 11, ಭೌತಶಾಸ್ತ್ರ – 89, ಸಂಖ್ಯಾಶಾಸ್ತ್ರ – 42, ಗಣಕಶಾಸ್ತ್ರ – 123, ಲೆಕ್ಕಶಾಸ್ತ್ರ – 13, ವ್ಯವಹಾರ ಅಧ್ಯಯನ – 19, ಸಂಸ್ಕೃತ – 186, ಕನ್ನಡ – 4, ಅರ್ಥಶಾಸ್ತ್ರ – 4, ಹಿಂದಿ – 9 ಸೇರಿದಂತೆ ಒಟ್ಟು 814 ಉತ್ತರ ಪತ್ರಿಕೆಗಳಿಗೆ ಪೂರ್ಣಾಂಕ ದೊರಕಿದೆ.

ಈ ಎಲ್ಲಾ ಸಾಧನೆಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.