ನ್ಯಾಯಾಧೀಶರ ಎದುರಿನಲ್ಲೇ ನಡೆಯಿತು ಘನಘೋರ ಶೂಟೌಟ್: ಗ್ಯಾಂಗ್ ಸ್ಟರ್ ಸಹಿತ ಮೂವರು ಸಾವು

ದೆಹಲಿ: ನ್ಯಾಯಾಧೀಶರ ಎದುರಿನಲ್ಲೇ ಘನಘೋರ ಶೂಟೌಟ್ ನಡೆದು ಗ್ಯಾಂಗ್ ಸ್ಟರ್ ಸಹಿತ ಮೂವರು ಹತ್ಯೆಗೀಡಾಗಿದ್ದು, ಹಲವು ಮಂದಿ ಗಾಯಗೊಂಡ ಘಟನೆ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಹರಿಯಾಣದ ಕುಖ್ಯಾತ ಗ್ಯಾಂಗ್​​ಸ್ಟರ್ ಜಿತೇಂದರ್ ಗೋಗಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು‌‌‌. ಈ ವೇಳೆ ನ್ಯಾಯಾಲಯದೊಳಗೆ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಸುನೀಲ್ ಅಲಿಯಾಸ್ ಟಿಲ್ಲು ತಾಜಪುರಿಯಾ ನೇತೃತ್ವದ ಎದುರಾಳಿ ತಂಡದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ವಕೀಲರ ವೇಷದಲ್ಲಿ ಬಂದು ಗುಂಡು ಹಾರಿಸಿದರು. ಗೋಗಿ ಜೊತೆಗಿದ್ದ ವಿಶೇಷ ಸೆಲ್ ಕೌಂಟರ್ […]