ಪರಿಸರ ಮಾಲಿನ್ಯ ಉಂಟುಮಾಡುವ ಗಣೇಶ ವಿಗ್ರಹ ಮಾರಾಟ ನಿಷೇಧ: ತಪ್ಪಿದಲ್ಲಿ ಕಾನೂನು ಕ್ರಮ

ಉಡುಪಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿರುವ ಗಣಪತಿ ವಿಗ್ರಹಗಳ ತಯಾರಿಕಾ ಘಟಕ ಹಾಗೂ ಮಾರಾಟ ಮಾಡುವ ಮಳಿಗೆಗಳನ್ನು ಪರಿವೀಕ್ಷಿಸಿದಾಗ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ವಿಗ್ರಹಗಳನ್ನು ತಯಾರಿಸುತ್ತಿರುವುದು ಹಾಗೂ ಬಣ್ಣ ಲೇಪಿತವಾದ ವಿಗ್ರಹಗಳನ್ನು ಮಾರಾಟಕ್ಕೆ ಇಟ್ಟಿರುವುದನ್ನು ಗಮನಿಸಿರುತ್ತಾರೆ. ಸದರಿ ವಿಷಯದ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಉಪಯೋಗಿಸಿ ತಯಾರಿಸುತ್ತಿರುವ ವಿಗ್ರಹಗಳು ಬಣ್ಣ ಲೇಪಿತವಾದ ಹಾಗೂ ಈಗಾಗಲೇ ತಯಾರಿಸಿ ಅಥವಾ ಇತರೆ ರಾಜ್ಯಗಳಿಂದ ಅಮದು […]