ಡಾ.ಬಿ.ಆರ್. ಅಂಬೇಡ್ಕರ್ ಎಲ್ಲಾ ಸಮುದಾಯಗಳ ತಳವರ್ಗಗಳ ನಿಜವಾದ ನಾಯಕ: ಪ್ರೊ ಕೆ ಫಣಿರಾಜ್

ಮಣಿಪಾಲ: ಡಾ.ಬಿ.ಆರ್. ಅಂಬೇಡ್ಕರ್ ಕೇವಲ ದಲಿತರಷ್ಟೇ ಅಲ್ಲದೆ ಎಲ್ಲಾ ಸಮುದಾಯಗಳ ತಳವರ್ಗಗಳ ಮತ್ತು ಒಟ್ಟು ಸಮಾಜದ ನಿಜವಾದ ನಾಯಕ. ಆ ಅರ್ಥದಲ್ಲಿ, ಅವರು ಗ್ರಾಮ್ಶಿಯು ಪ್ರತಿಪಾದಿಸಿದ ಸಂಪೂರ್ಣ ‘ಆರ್ಗಾನಿಕ್ ಇಂಟಲೆಕ್ಚುಯಲ್’ ಎಂದು ಲೇಖಕ-ಚಿಂತಕ ಪ್ರೊ ಕೆ ಫಣಿರಾಜ್ ವಾದಿಸಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ನಡೆದ ‘ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ಐತಿಹಾಸಿಕ ಮಹತ್ವ’ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ.ಫಣಿರಾಜ್, ಡಾ.ಅಂಬೇಡ್ಕರ್ ಅವರನ್ನು ಕೇವಲ ದಲಿತರ ನಾಯಕ ಎಂದು […]

ಮಾಹೆ ಗಾಂಧಿಯನ್ ಸೆಂಟರಿನಲ್ಲಿ ಪಟ್ಟಚಿತ್ರ ಕಾರ್ಯಾಗಾರ

ಮಣಿಪಾಲ: ಸಮಾಜವು ಕಲೆ ಮತ್ತು ಕಲಾವಿದರನ್ನು ಬೆಂಬಲಿಸಿದರೆ ಮಾತ್ರ ಕಲೆ ಉಳಿಯುತ್ತದೆ. ಉತ್ತಮ ಕಲೆಯ ರಚನೆಗೆ ಕಲಾಕಾರರ ಸಂಪೂರ್ಣ ಸಮರ್ಪಣೆ ಬೇಕು ಮತ್ತು ಅದರಲ್ಲಿ ಸಂತೋಷವೂ ಅಡಕವಾಗಿದೆ ಎಂದು ಒಡಿಶಾದ ಪಟ್ಟಚಿತ್ರ ಕಲಾವಿದೆ ಗೀತಾಂಜಲಿ ದಾಸ್ ಹೇಳಿದರು. ಪಟ್ಟಚಿತ್ರ ಕಾರ್ಯಾಗಾರವನ್ನು ನಡೆಸಲು ಉಡುಪಿಗೆ ಆಗಮಿಸಿದ್ದ ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಿದ್ದರು. ಗೀತಾಂಜಲಿ ದಾಸ್ ಅವರು ಪಟ್ಟಚಿತ್ರ ಕಲಾ ಪ್ರಕಾರದ ವಿಶೇಷತೆಗಳು, ಅದಕ್ಕೆ ಬಳಸುವ ಮೂಲ […]

ಮಾಹೆ ಗಾಂಧಿಯನ್ ಸೆಂಟರ್ ವತಿಯಿಂದ ಯೂಥ್ ಪಾರ್ಲಿಮೆಂಟ್ ಕಾರ್ಯಕ್ರಮ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ಆಶ್ರಯದಲ್ಲಿ ಸಂಸದೀಯ ಕಾರ್ಯವಿಧಾನ ಮತ್ತು ಚರ್ಚೆಗಳ ಉತ್ತಮ ತಿಳುವಳಿಕೆಗಾಗಿ ‘ಯೂಥ್ ಪಾರ್ಲಿಮೆಂಟ್’ ನ್ನು ಶನಿವಾರ ಹಮ್ಮಿಕೊಳ್ಳಲಾಯಿತು. ಇದನ್ನು ವಿಭಾಗದ ಬಿಎ- ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್ ನ ವಿದ್ಯಾರ್ಥಿಗಳು ಆಯೋಜಿಸಿದ್ದರು, ಇತರ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಂಸತ್ತಿನ ಕಲಾಪವನ್ನು ಪ್ರಶ್ನೋತ್ತರ ಅವಧಿ, ವಿಧೇಯಕಗಳ ಮಂಡನೆ ಇತ್ಯಾದಿಗಳೊಂದಿಗೆ ಮರುಸೃಷ್ಟಿಸಿದರು ಮತ್ತು ಆರೋಗ್ಯ-ಕುಟುಂಬ ಕಲ್ಯಾಣ, ಕೃಷಿ, ಮಹಿಳೆ, ಗೃಹ ವ್ಯವಹಾರ ಇತ್ಯಾದಿ ವಿಷಯಗಳ […]

ಗಾಂಧಿಯನ್ ಸೆಂಟರ್ ವಿದ್ಯಾರ್ಥಿಗಳಿಂದ ಐತಿಹಾಸಿಕ ಸ್ಥಳಗಳ ಭೇಟಿ

ಮಣಿಪಾಲ: ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ನ ವಿದ್ಯಾರ್ಥಿಗಳು ತಮ್ಮ ದೃಶ್ಯ ಕಲೆಗಳ ಅಧ್ಯಯನದ ಭಾಗವಾಗಿ ಮೂಡುಬಿದಿರೆ ಮತ್ತು ಮಂಗಳೂರಿನಲ್ಲಿರುವ ಐತಿಹಾಸಿಕ ಮತ್ತು ಕಲಾತ್ಮಕ ಮಹತ್ವವನ್ನು ಹೊಂದಿದ ಅನೇಕ ಸ್ಥಳಗಳಿಗೆ ಭೇಟಿ ನೀಡಿದರು. ಈ ಪ್ರದೇಶದ ಭಿತ್ತಿಚಿತ್ರಗಳನ್ನು ಅಧ್ಯಯನ ಮಾಡಲು ಅವರು ಸಾವಿರ ಕಂಬದ ಬಸದಿ, ಪ್ರಾಚೀನ ಜೈನ ಮಠ ಮತ್ತು ಸೇಂಟ್ ಅಲೋಶಿಯಸ್ ಚಾಪೆಲ್‌ಗೆ ಭೇಟಿ ನೀಡಿದರು. ಜೈನ ಮಠಾಧೀಶರಾದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರಯವರಿಯ ಸ್ವಾಮೀಜಿ ಅವರೊಂದಿಗೆ ಸಂವಾದ ನಡೆಸಿದ ಅವರು ತದನಂತರ […]

ಕೇಂದ್ರ ಬಜೆಟ್ ನಲ್ಲಿ ಪರಿಸರ ಅರ್ಥಶಾಸ್ತ್ರಕ್ಕೆ ನಿರೀಕ್ಷಿತ ಪ್ರಮಾಣದ ಬೆಂಬಲವಿಲ್ಲ: ಡಾ.ರೆಸ್ಮಿ ಭಾಸ್ಕರನ್

ಮಣಿಪಾಲ: ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ “ಯೂನಿಯನ್ ಬಜೆಟ್ -2023” ಅನ್ನು ಪರಿಸರ ಅರ್ಥಶಾಸ್ತ್ರದ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಅದು ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ. ಬಜೆಟ್‌ನಲ್ಲಿ ಭರವಸೆ ನೀಡಿರುವ ಹಸಿರು ಬೆಳವಣಿಗೆಯು ಸದ್ಯದ ಪರಿಸರಕ್ಕೆ ಒದಗಿರುವ ಸವಾಲುಗಳನ್ನು ಎದುರಿಸಲು ಸಾಕಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞೆ ಮತ್ತು ಲೇಖಕಿ ಡಾ.ರೆಸ್ಮಿ ಭಾಸ್ಕರನ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ಆಶ್ರಯದಲ್ಲಿ ‘ಕೇಂದ್ರ ಬಜೆಟ್ ಮತ್ತು ಪರಿಸರ ಅರ್ಥಶಾಸ್ತ್ರ’ದ ಕುರಿತು ಎರಡು ಉಪನ್ಯಾಸಗಳನ್ನು ನೀಡಿ ಮಾತನಾಡಿದ ಡಾ.ರೆಸ್ಮಿ ಭಾಸ್ಕರನ್, […]