ಎಂ.ಟಿ. ವಾಸುದೇವನ್ ನಾಯರ್ ಜನಾಂಗದ ಕಣ್ಣು ತೆರೆಸಿದ ಲೇಖಕ: ವೈದೇಹಿ
ಮಣಿಪಾಲ: 90 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಲೇಖಕ ಎಂ.ಟಿ. ವಾಸುದೇವನ್ ನಾಯರ್ ಇವರು ತಮ್ಮ ಅಪೂರ್ವ ಒಳನೋಟಗಳಿಂದ ಮನುಷ್ಯನ ಮನಸ್ಸಿನ ಪದರು ಪದರುಗಳನ್ನು ಬಿಚ್ಚಿಟ್ಟು ಜನಾಂಗದ ಕಣ್ಣು ತೆರೆಸಿದ್ದಾರೆ. ತಮ್ಮ ನಡೆ-ನುಡಿ , ಆಚಾರ-ವಿಚಾರಗಳಿಂದ ಕೇರಳ ಸಂಸ್ಕೃತಿಯ, ಹೀಗಾಗಿ ಭಾರತೀಯ ಸಂಸ್ಕೃತಿಯ ಅಪ್ಪಟ ಪ್ರತೀಕವಾಗಿದ್ದಾರೆ ಎಂದು ಖ್ಯಾತ ಲೇಖಕಿ ವೈದೇಹಿ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಸಹೃದಯ ಸಂಗಮಮ್, ಕೇರಳ ಕಲ್ಚರಲ್ ಆಂಡ್ ಸೋಶಿಯಲ್ […]
ಯುವ ಜನತೆ ಸಂಗೀತದ ಸೂಕ್ಷ್ಮಗಳನ್ನು ತಾಳ್ಮೆಯಿಂದ ಅರಿಯಬೇಕು: ಪಂಡಿತ್ ಮಿಲಿಂದ್ ಚಿತ್ತಾಲ್
ಮಣಿಪಾಲ: ಶಾಸ್ತ್ರೀಯ ಸಂಗೀತದಲ್ಲಿ ಮನಸ್ಸನ್ನು ಶಮನಗೊಳಿಸುವ ಅಂಶಗಳಿವೆ. ಇಂದಿನ ಯುವ ಜನಾಂಗ ಈ ಸಂಗೀತದ ಸೂಕ್ಷ್ಮಗಳನ್ನು ತಾಳ್ಮೆಯಿಂದ ಅರಿಯುವ ಯತ್ನ ಮಾಡಬೇಕು ಎಂದು ಖ್ಯಾತ ಸಂಗೀತಗಾರ ಪಂಡಿತ್ ಮಿಲಿಂದ್ ಚಿತ್ತಾಲ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜೆಸಿಪಿಎಎಸ್), ಎಂಐಸಿ, ಎಂಐಟಿ ಯ ಆಶ್ರಯದಲ್ಲಿ ನಡೆದ ಹಿಂದೂಸ್ತಾನಿ ಗಾಯನದ ನಂತರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಆಧುನಿಕ ಸಮಾಜದಲ್ಲಿ ಸೇರಿಕೊಂಡಿರುವ ತೀವ್ರತರವಾದ ವೇಗ ಬದುಕಿನ ನೆಮ್ಮದಿಯನ್ನು ಕದಡುತ್ತದೆ. ಅಂತಹ ಸ್ಥಿತಿಯಲ್ಲಿ ಮುಖ್ಯವಾಗಿ […]
ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿ ಬಿಡುಗಡೆ
ಮಣಿಪಾಲ: ಲೇಖಕ, ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿಯನ್ನು ಇತ್ತೀಚೆಗೆ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಬಿಡುಗಡೆ ಮಾಡಲಾಯಿತು. ಕನ್ನಡ ಸಾಹಿತ್ಯ ಲೋಕಕ್ಕೆ ವಿಭಿನ್ನ ಕೊಡುಗೆಯಾಗಿರುವ ಈ ಕಾದಂಬರಿಯು ಕಾರ್ಪೊರೇಟ್ ಜಗತ್ತು ಮತ್ತು ಭೌಗೋಳಿಕ ರಾಜಕೀಯ ಸನ್ನಿವೇಶದೊಂದಿಗೆ ಸಂವಾದಿಸುತ್ತದೆ ಕೃತಿ ಬಿಡುಗಡೆ ಮಾಡಿ ಬರಹಗಾರ ರಾಜಾರಾಮ್ ತಲ್ಲೂರ್ ಹೇಳಿದರು. ಕಾದಂಬರಿಯಲ್ಲಿ ಸಂಬಂಧಗಳ ಪರಿಶೋಧನೆಯೇ ಜೀವನದ ಅಂತಿಮ ಉದ್ದೇಶವಾಗಿದೆ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಹೇಳಿದರು. ಕಾದಂಬರಿಯಲ್ಲಿ ಪುರುಷ […]
ಕಲೆ ವಿಶ್ವ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ: ಮೆರ್ಲಿ ಬರ್ಲಾನ್
ಮಣಿಪಾಲ: ಕಲೆ ವಿಶ್ವದಾದ್ಯಂತ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ವ ಶಾಂತಿಯ ಅಂತರರಾಷ್ಟ್ರೀಯ ಮಹಿಳಾ ಒಕ್ಕೂಟ (WFWPI) ಯುಎನ್ ಸಂಬಂಧಗಳ (ನ್ಯೂಯಾರ್ಕ್) ನಿರ್ದೇಶಕಿ ಮೆರ್ಲಿ ಬರ್ಲಾನ್ ಹೇಳಿದರು. ಅವರು ವಿಶ್ವ ಶಾಂತಿಯ ಅನ್ವೇಷಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ ಮಣಿಪಾಲದ ವಿಶೇಷಚೇತನ ಮಕ್ಕಳ ವಿಶೇಷ ಮನೆಯಾದ ‘ಆಸರೆ’ಯನ್ನು ಬೆಂಬಲಿಸುವ ಸಾಂಸ್ಕೃತಿಕ ಸಂಜೆ ‘ಆರ್ಟ್ ಫಾರ್ ಪೀಸ್’ […]
ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿದ ಕಲೆ ಸಾರ್ಥಕ ಜೀವನದ ಸಾಧನ: ಮಧುಬನಿ ಕಲಾವಿದರ ಅಭಿಮತ
ಮಣಿಪಾಲ: ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ ಕಲೆ ಜನರನ್ನು ಒಂದು ಮಾಡುತ್ತದೆ ಮತ್ತು ಏಕತೆಯ ಸಂದೇಶವನ್ನು ಹರಡುತ್ತದೆ ಎಂದು ಬಿಹಾರದ ಮಧುಬನಿ ಕಲಾವಿದರು ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವಿದ್ಯಾರ್ಥಿಗಳೊಂದಿಗೆ ಮಧುಬನಿ ಕಲಾವಿದರಾದ ಸರವಣ್ ಕುಮಾರ್ ಪಾಸ್ವಾನ್, ಸಂತೋಷ್ ಕುಮಾರ್ ಪಾಸ್ವಾನ್ ಮತ್ತು ಉಜಾಲಾ ಕುಮಾರಿ ಮಾತನಾಡಿ, ಕಲೆಯು ಸಾರ್ಥಕ ಜೀವನದ ಸಾಧನವಾಗಿದೆ ಎಂದು ಹೇಳಿದರು. ಕಲಾವಿದರು ತಮ್ಮ ಹುಟ್ಟಿನ ಆಧಾರದ ಮೇಲೆ ತಾರತಮ್ಯವನ್ನು ಎದುರಿಸುವುದು ನಿಜವಾದರೂ ಕಲೆ […]