ಇಂದಿನಿಂದ ಹೊಸ ನಿಯಮಗಳು ಜಾರಿ: ಇನ್ನೂ ಡಿಎಲ್, ಆರ್ ಸಿ ಬದಲು ಡಿಜಿಟಲ್ ಇ- ಕಾಪಿ ತೋರಿಸಿದರೆ ಸಾಕು

ನವದೆಹಲಿ: ಮೋಟಾರು ವಾಹನ ಕಾಯ್ದೆಯ ಹೊಸ ನಿಯಮಗಳು ಇಂದಿನಿಂದ ಜಾರಿಗೆ ಬರುತ್ತಿದ್ದು, ವಾಹನ ಸವಾರರು ಇನ್ಮುಂದೆ ಚಾಲನಾ ಪರವಾನಗಿ (ಡಿಎಲ್‌) ಮತ್ತು ರೆಜಿಸ್ಟ್ರೇಷನ್‌ ಸರ್ಟಿಫಿಕೆಟ್‌ (ಆರ್‌ಸಿ) ಕಾರ್ಡ್‌ಗಳ ಬದಲು ಇ–ಕಾಪಿಗಳನ್ನು ತೋರಿಸಬಹುದಾಗಿದೆ. ವಾಹನ ಸವಾರರು ಡಿಎಲ್‌ ಮತ್ತು ಆರ್‌ಸಿ ಕಾರ್ಡ್‌ಗಳನ್ನು ಜೊತೆಯಲ್ಲೇ ಇಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ಪರಿಶೀಲನೆ ಸಂದರ್ಭಗಳಲ್ಲಿ ಡಿಜಿಟಲ್‌ ಪ್ರತಿಗಳನ್ನು ತೋರಿಸಿದರೆ ಸಾಕು. ಕೇಂದ್ರ ಸರ್ಕಾರದ ಡಿಜಿ ಲಾಕರ್‌ ಅಥವಾ ಎಂ–ಪರಿವಹನ್‌ ರೀತಿಯ ಪೋರ್ಟಲ್‌ಗಳಿಗೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಿಕೊಂಡು, ಅಗತ್ಯವಾದಲ್ಲಿ ಡಿಜಿಟಲ್‌ ಪ್ರತಿಯನ್ನೇ ತೋರಿಸಬಹುದಾಗಿದೆ. ಆಹಾರ ಪೊಟ್ಟಣಗಳಲ್ಲಿ […]