ಕಡಿಯಾಳಿ ಆಸರೆ ಚಾರಿಟೇಬಲ್ ಟ್ರಸ್ಟ್ ನಿಂದ 100ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ: ಉದ್ಘಾಟನೆ
ಉಡುಪಿ: ಶಾಸಕ ರಘುಪತಿ ಭಟ್ ನೇತೃತ್ವದ ಆಸರೆ ಚಾರಿಟೇಬಲ್ ಟ್ರಸ್ಟ್ ಉಡುಪಿ ಭಾಗದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಆರ್ಥಿಕವಾಗಿ ಹಿಂದುಳಿದವರ ದೀನ ದಲಿತ ಬಡವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಸೇವೆಯನ್ನು ನಡೆಸುತ್ತಿದ್ದು, ಈವರೆಗೆ ಸುಮಾರು 100 ಮನೆಗಳಿಗೆ ಟ್ರಸ್ಟ್ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. 100ನೇ ಮನೆಯ ವಿದ್ಯುತ್ ಸಂಪರ್ಕವನ್ನು ಬುಧವಾರ ಇಂದ್ರಾಳಿ ಮಂಚಿ ಕುಮೇರಿಯ ಮನೆಯಲ್ಲಿ ದಾನಿಗಳಾದ ಎಂ.ಐ.ಟಿ ಮಣಿಪಾಲದ ಪ್ರೊಫೆಸರ್ ಡಾ. ನಾರಾಯಣ್ ಶೆಣೈ ಉದ್ಘಾಟಿಸಿದರು. ಕೊಡವೂರಿನಲ್ಲಿ ದಾನಿಗಳಾದ ದೇವಾನಂದ […]