ಮಂಗಳೂರು: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಪರಿವಾರದಿಂದ ಅಂಗಾಂಗ ದಾನ
ಮಂಗಳೂರು: ಅಪಘಾತದ ನಂತರ ಮೆದುಳು ನಿಷ್ಕ್ರಿಯಗೊಂಡ 37 ವರ್ಷದ ಅಪಘಾತ ಸಂತ್ರಸ್ತರ ಅಂಗಾಂಗಗಳನ್ನು ಆತನ ಪರಿವಾರದವರ ಸಮ್ಮತಿಯ ಮೇರೆಗೆ ಅವಶ್ಯವಿದ್ದವರಿಗೆ ದಾನ ಮಾಡಲಾಗಿದೆ. ಮಂಗಳೂರಿನ ಫಾ. ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೋಮವಾರದಂದು ಶಸ್ತ್ರಚಿಕಿತ್ಸೆ ನಡೆಸಿ, ಅಂಗಾಗಗಳನ್ನು ಇತರ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಮೂಡಿಗೆರೆಯ ಹೊರಟ್ಟಿ ಗ್ರಾಮದ ಧನ್ಯಕುಮಾರ್ ಹೆಚ್ ಎಂ ಎಂಬವರು ಡಿ.8ರಂದು ಸಬ್ಬೇನಹಳ್ಳಿಯಲ್ಲಿ ಬೈಕ್ ಅಪಘಾತಕ್ಕೀಡಾಗಿದ್ದು, ಡಿ.9ರಂದು ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆತನ ತಲೆಗೆ ತೀವ್ರ ಗಾಯವಾಗಿತ್ತು. ಧನ್ಯಕುಮಾರ್ ಚಿಕಿತ್ಸೆಗೆ ಸ್ಪಂದಿಸದಿದ್ದಾಗ ವೈದ್ಯರು ಅವರ ಮೆದುಳು […]