ಮತಾಂತರ ಕಿರುಕುಳಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ.!

ಮಂಗಳೂರು: ಮಂಗಳೂರಿನ ಮೋರ್ಗನ್ಸ್ ಗೇಟ್​ ಸಮೀಪ ಇಂದು ನಡೆದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮತಾಂತರದ ಕಿರುಕುಳಕ್ಕೆ ಇಡೀ ಕುಟುಂಬ ಬಲಿಯಾಗಿದೆ ಎಂಬ ಸ್ಫೋಟಕ ಅಂಶ ಸಾವಿಗೂ ಮುನ್ನ ಮನೆಯ ಮಾಲೀಕ ಬರೆದ ಡೆತ್​ನೋಟ್​ ನಲ್ಲಿ ಬಹಿರಂಗಗೊಂಡಿದೆ‌. ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ನಾಗೇಶ್ ಶೆರಗುಪ್ಪಿ(30) ಮತ್ತು ಪತ್ನಿ ವಿಜಯಲಕ್ಷ್ಮೀ(26) ಹಾಗೂ ಮಕ್ಕಳಾದ ಸ್ವಪ್ನ(8) ಹಾಗೂ ಸಮರ್ಥ್(4) ಇಂದು ಆತ್ಮಹತ್ಯೆಗೆ ಶರಣಾಗಿದ್ದರು. ಮೊದಲು ಮಕ್ಕಳಿಗೆ ವಿಷ ಉಣಿಸಿ ಬಳಿಕ ತಂದೆ ತಾಯಿ ನೇಣಿಗೆ […]