ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸಂಸ್ಥಾಪಕ, ಬಿಲ್ಲವ ಮುಖಂಡ ಜಯ ಸಿ. ಸುವರ್ಣ ವಿಧಿವಶ
ಮಂಗಳೂರು: ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸಂಸ್ಥಾಪಕ, ಬಿಲ್ಲವ ಮುಖಂಡ ಜಯ ಸಿ. ಸುವರ್ಣ(75) ಮಂಗಳವಾರ ತಡರಾತ್ರಿ ನಿಧನ ಹೊಂದಿದರು. ಮೂಲತಃ ಮೂಲ್ಕಿಯವರಾದ ಜಯ ಸಿ. ಸುವರ್ಣ ಅವರು ಮುಂಬೈನಲ್ಲಿ ಹೋಟೆಲ್ ಉದ್ಯಮದ ಮೂಲಕ ಬದುಕು ಕಟ್ಟಿಕೊಂಡರು. ಬಳಿಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದರು. ಮುಂಬೈ ಸಹಿತ ವಿವಿಧ ಕಡೆ ಬಿಲ್ಲವರ ಯೂನಿಯನ್ ಸ್ಥಾಪಿಸಿ, ಬಿಲ್ಲವರ ಏಳಿಗೆಗೆ ಶ್ರಮಿಸಿದರು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು ಆಗಿದ್ದಾರೆ. ಸುವರ್ಣರು ಪತ್ನಿ, […]