ಬ್ರಹ್ಮಾವರ: ಫಾರ್ಚ್ಯೂನ್ ಅಕಾಡೆಮಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ
ಬ್ರಹ್ಮಾವರ: ಇಲ್ಲಿನ ರಾ.ಹೆ 66 ರ ಪಕ್ಕದಲ್ಲಿರುವ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸನ್ ನ ಜನರಲ್ ನರ್ಸಿಂಗ್ ಮತ್ತು ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗಿಸುವ ಮತ್ತು ಪತ್ರಿಜ್ಞಾ ವಿಧಿ ಸ್ವೀಕರಿಸುವ ಕಾರ್ಯಕ್ರಮವು ಜ.29 ರಂದು ಬಿ.ಡಿ.ಶೆಟ್ಟಿ ಆಡಿಟೋರಿಯಂ ಹಾಲ್ ನಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಮಲ್ನಾಡ್ ಹೈಟೆಕ್ ಡಯಾಗ್ನಾಸ್ಟಿಕ್ ಸೆಂಟರ್ ಶಿವಮೊಗ್ಗ ಇದರ ವಿಕಿರಣಶಾಸ್ತ್ರ ವಿಭಾಗದ ಸಲಹೆಗಾರ್ತಿ ಡಾ. ಶ್ರದ್ದಾ ಶೆಟ್ಟಿ ಭಾಗವಹಿಸಿದ್ದರು. ಬಿ.ಡಿ ಶೆಟ್ಟಿ ಬಿಸ್ ನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ನಿವೃತ್ತ […]
ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಸಾಂಪ್ರದಾಯಿಕ ದಿನ ಆಚರಣೆ
ಬ್ರಹ್ಮಾವರ: ಇಲ್ಲಿನ ಮಧುವನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಓಣಂ ಸಂಭ್ರಮ ಆಚರಣೆಯ ಅಂಗವಾಗಿ ಸಂಭ್ರಮ -2022 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬುಧವಾರದಂದು ಸಾಂಪ್ರದಾಯಿಕ ದಿನವನ್ನು ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಫಾರ್ಚ್ಯೂನ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ತಾರಾನಾಥ್ ಶೆಟ್ಟಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಸ್ಮಿತಾ ವಿಜೇತರಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ “ಆರಂಭಮ್ – 2022” ಓಣಂ ಸಾಂಸ್ಕೃತಿಕ ಕಾರ್ಯಕ್ರಮ
ಬ್ರಹ್ಮಾವರ: ಇಲ್ಲಿನ ಮಧುವನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಚ್ಯೂನ್ ಆರೋಗ್ಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಓಣಂ ಹಬ್ಬದ ಅಂಗವಾಗಿ “ಆರಂಭಮ್ – 2022” ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರದಂದು ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲೆ ಸ್ಮಿತಾ ಮಾತನಾಡಿ, ಓಣಂ ಎನ್ನುವುದು ಕೇರಳದಲ್ಲಿ ಚಕ್ರವರ್ತಿ ಬಲಿಯ ನೆನಪಿಗಾಗಿ ಆಚರಿಸುವ ಹಬ್ಬ. ಇದು ಕೇರಳದ ಸಂಸ್ಕೃತಿ, ಧಾರ್ಮಿಕತೆ ಮತ್ತು ಪರಂಪರೆಯನ್ನು ಬಿಂಬಿಸುವ ಈ ಹಬ್ಬಕ್ಕೆ ಬಹಳ ಮಹತ್ವ ಇದೆ. ಈ ಹಬ್ಬವನ್ನು ಆಚರಿಸುವ ಮೂಲಕ […]