ನಿವೇಶನ ಸಂತ್ರಸ್ತರಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಮನವಿ
ಉಡುಪಿ: ಉಡುಪಿ ನಗರ ವ್ಯಾಪ್ತಿಯ ನಿವೇಶನ ಸಂತ್ರಸ್ತರು ಇಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಭೇಟಿಯಾಗಿ ನಿವೇಶನ ಖರೀದಿಯಲ್ಲಿ ಆಗಿರುವ ಕಾನೂನು ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು. ಎರಡು ದಶಕಗಳ ಹಿಂದೆ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದೆ ಪರಿವರ್ತಿತ ಜಮೀನಿನಲ್ಲಿ ನಿವೇಶನಗಳನ್ನು ಸರ್ಕಾರದ ನೋಂದಣಿ ಪ್ರಕ್ರಿಯೆಯ ಪ್ರಕಾರ ಖರೀದಿಸಿದ್ದು, ಇಂದು ಆ ನಿವೇಶನಗಳಲ್ಲಿ ಮನೆಕಟ್ಟಲಾಗದೆ ಜನರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇವರ ನಿವೇಶನಗಳನ್ನು 2010-13ರಲ್ಲಿ ಅಕ್ರಮವೆಂದು ಘೋಷಿಸಿ ಸಕ್ರಮಗೊಳಿಸಲು ಸರ್ಕಾರ […]