ಶಿರ್ವ: ಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆ ರಕ್ಷಣೆ
ಶಿರ್ವ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಪಾಡಿ ಪದವು ಬಳಿಯ ಅಶ್ವತ್ಥಕಟ್ಟೆ ಸಮೀಪ ಶಿರ್ವ-ಪಳ್ಳಿ ಮುಖ್ಯರಸ್ತೆಯ ಕಾಡಿನಲ್ಲಿ ತಂತಿ ಬೇಲಿಗೆ ಚಿರತೆಯೊಂದು ಸಿಲುಕಿ ಒದ್ದಾಡುತ್ತಿದ್ದು, ಇದನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದು ಇಲಾಖೆಯ ಅಧಿಕಾರಿಗಳ ತಂಡವು ಬುಧವಾರದಂದು ಚಿರತೆಯನ್ನು ರಕ್ಷಿಸಿದೆ. ತಂಡದಲ್ಲಿ ಪಡುಬಿದ್ರೆ ಉಪ ವಲಯಾರಣ್ಯಾಧಿಕಾರಿ ಗುರುರಾಜ್ ಕೆ., ಅರಣ್ಯ ರಕ್ಷಕ ಚರಣ್‌ರಾಜ್ ಜೋಗಿ, ಮಂಜುನಾಥ್ ನಾಯಕ್, ಕೇಶವ ಪೂಜಾರಿ, ವಾಹನ ಚಾಲಕ ಜೋಯ್ ಮುಂತಾದವರು ಇದ್ದರು. ಚಿರತೆಗೆ ಅರಿವಳಿಕೆ ಮದ್ದು ನೀಡಿ ರಕ್ಷಿಸಲಾಯಿತು.
ಬ್ರಹ್ಮಾವರ: ಬೋನಿಗೆ ಬಿದ್ದ ಚಿರತೆ, ನಿರಾಳರಾದ ಜನತೆ
ಬ್ರಹ್ಮಾವರ: ಎರಡು ದಿನಗಳ ಹಿಂದೆ ಕುಂದಾಪುರ ತಾಲೂಕಿನಲ್ಲಿ ಚಿರತೆಯೊಂದು ಬೋನಿಗೆ ಬಿದ್ದ ಬೆನ್ನಲ್ಲೆ ಇವತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಮತ್ತೊಂದು ಚಿರತೆಯೊಂದು ಬೋನಿನಲ್ಲಿ ಸೆರೆಯಾಗಿದೆ. ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದೆ. ಕೆಲವು ದಿನಗಳಿಂದ ಚಿರತೆ ಕಾಟದಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಮನವಿ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಈ ಚಿರತೆಯು ಗ್ರಾಮದ ಸಾಕು ಪ್ರಾಣಿ, ದನಗಳನ್ನ ಭಕ್ಷಿಸುವ ಮೂಲಕ ಭಯದ ವಾತಾವರಣ […]
ಸೆಪ್ಟಂಬರ್ 11 ರಂದು ಅರಣ್ಯ ಹುತಾತ್ಮರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ
ಉಡುಪಿ: ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ, ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಹಾಗೂ ರಕ್ತನಿಧಿ ಕೇಂದ್ರ ಜಿಲ್ಲಾ ಸರಕಾರಿ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಅರಣ್ಯ ಹುತಾತ್ಮರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಸೆಪ್ಟಂಬರ್ 11 ರಂದು ಬೆಳಗ್ಗೆ 10 ಗಂಟೆಗೆ ನಗರದ ಬ್ರಹ್ಮಗಿರಿಯ ಐ.ಎಮ್.ಎ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಬಿಲ್ಲವ ಅಧ್ಯಕ್ಷತೆ ವಹಿಸಲಿದ್ದಾರೆ. […]
ಪಾಳು ಬಿದ್ದ ಮನೆಯಲ್ಲಿ ಅಡಗಿದ್ದ ಚಿರತೆ ಸೆರೆ
ಉಡುಪಿ: ಇಲ್ಲಿನ ಪಾಳು ಬಿದ್ದಿದ್ದ ಮನೆಯೊಂದರಲ್ಲಿ ಅವಿತುಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇಲ್ಲಿನ ಜನಾಶ್ರಯವಿಲ್ಲದ ಮನೆಯಲ್ಲಿ ಚಿರತೆಯೊಂದು ಅಡಗಿಕೊಂಡಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಸಫಲರಾಗಿದ್ದರೆ. ಮಣಿಪಾಲ, ಸರಳೇಬೆಟ್ಟು ಪರಿಸರದಲ್ಲಿ ಹಲವು ದಿನಗಳಿಂದ ಚಿರತೆ ಓಡಾಟ ಕಂಡುಬಂದಿದ್ದು, ಸ್ಥಳೀಯರು ರಾತಿವೇಳೆ ಓಡಾಡಲು ಭಯಪಡುವಂತಾಗಿದೆ.
ತಿಂಗಳಿಗೆ 15 ದಿನ ಅರಣ್ಯದಲ್ಲೇ ಇರಿ: ಹಿರಿಯ ಅರಣ್ಯ ಇಲಾಖಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ನಿರ್ದೇಶನ
ಬೆಂಗಳೂರು: ಜಿಲ್ಲಾ ಮಟ್ಟದ ಅರಣ್ಯಾಧಿಕಾರಿಗಳಿಂದ ಹಿಡಿದು ಪ್ರಧಾನ ಕಾರ್ಯದರ್ಶಿವರೆಗಿನ ಎಲ್ಲ ಅರಣ್ಯ ಇಲಾಖಾಧಿಕಾರಿಗಳು ತಿಂಗಳಲ್ಲಿ 15 ದಿನಗಳ ಕಾಲ ಅರಣ್ಯದಲ್ಲಿ ಇರುವಂತೆ ಶನಿವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. “ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲೆ ನೆಲೆಸಿದ್ದಾರೆ. ನೀವು ನಿಮ್ಮ ಕಛೇರಿಯಿಂದ ಹೊರಗೆ ಬರುತ್ತಿಲ್ಲ. ಕಾಡಿಗೆ ಹೋಗಿ, ತಿಂಗಳಿಗೆ 15 ದಿನ ಅಲ್ಲೇ ಇರಿ. ಇದು ಇಲಾಖೆಯ ಇತರ ಸಿಬ್ಬಂದಿಗಳ ನೈತಿಕತೆಯನ್ನು ಹೆಚ್ಚಿಸುತ್ತದೆ. ಹಿರಿಯ ಅಧಿಕಾರಿಗಳು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ” ಎಂದು ಬೊಮ್ಮಾಯಿ ಹೇಳಿದ್ದಾರೆ ಎಂದು […]