ಬ್ರಹ್ಮಾವರ: ಎಸ್. ಎಂ.ಎಸ್ ಕಾಲೇಜಿನಲ್ಲಿ ಫುಡ್ ಫೆಸ್ಟ್ 2023

ಬ್ರಹ್ಮಾವರ: ಎಸ್.ಎಂ.ಎಸ್.ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಫುಡ್ ಫೆಸ್ಟ್ 2023 ಕಾರ್ಯಕ್ರಮವು ಏಪ್ರಿಲ್ 8 ರಂದು ಅದ್ದೂರಿಯಾಗಿ ನೆರವೇರಿತು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು 18 ತಂಡಗಳಲ್ಲಿ 200 ಕ್ಕೂ ಅಧಿಕ ಆಹಾರ ಪದಾರ್ಥಗಳನ್ನು ತಯಾರಿಸಿ ತೀರ್ಪುಗಾರರ ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಓ.ಎಸ್.ಸಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ, ಕಾಲೇಜಿನ ಸಂಚಾಲಕರಾದ ರೆ.ಫಾ ಎಂ.ಸಿ.ಮಥಾಯ್, ಓ.ಎಸ್.ಸಿ.ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷ ರೆ.ಫಾ. ಲಾರೆನ್ಸ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಅಲೆನ್ ರೋಹನ್ ವಾಜ್, ಕಾರ್ಯದರ್ಶಿ ಅಲ್ವರಿಸ್ ಡಿಸಿಲ್ವಾ, […]