ಹೆಚ್ಚುತ್ತಿರುವ ಜಾಗತಿಕ ಆರ್ಥಿಕ ಕುಸಿತ: ತಂತ್ರಜ್ಞಾನ ಕಂಪನಿಗಳಿಂದ ಸಾಲು ಸಾಲು ಉದ್ಯೋಗ ಕಡಿತ
ನವದೆಹಲಿ: 10 ವರ್ಷಗಳ ಕಾಲ ಸ್ಟಾಕ್ ಮಾರುಕಟ್ಟೆಯನ್ನು ಆಳಿದ ತಂತ್ರಜ್ಞಾನ ಕಂಪನಿಗಳು ಹೊಸ ವಾಸ್ತವಕ್ಕೆ ಹೊಂದಿಕೊಳ್ಳುತ್ತಿರುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತಗಳು ಹೆಚ್ಚಾಗುತ್ತಿವೆ. ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಅದರ ಹೊಸ ಬಾಸ್ ಎಲೋನ್ ಮಸ್ಕ್ ತನ್ನ ಕಂಪನಿಯ ಅರ್ಧದಷ್ಟು ಉದ್ಯೋಗಿಗಳನ್ನು ಕಂಪನಿಯಿಂದ ಹೊರಕಳಿಸಿದ್ದಾರೆ. ಫೇಸ್‌ಬುಕ್ ಪೋಷಕ ಕಂಪನಿ ಮೆಟಾದ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಇದುವರೆಗಿನ ಅತಿ ಹೆಚ್ಚಿನ ವಜಾಗಳನ್ನು ಘೋಷಿಸಿದೆ. ಮೆಟಾ ತನ್ನ 13% ಸಿಬ್ಬಂದಿಯನ್ನು ತೆಗೆದುಹಾಕುತ್ತಿದೆ ಎಂದು ಬುಧವಾರ ಹೇಳಿದ್ದು, […]
ಇ-ಕಾಮರ್ಸ್ ಡೆಲಿವರಿ ವಂಚನೆ: ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಗಳ ಬದಲಿಗೆ ಬರುತ್ತಿವೆ ಡಿಟರ್ಜೆಂಟ್ ಸೋಪುಗಳು!
ಮುಂಬೈ: ದೇಶದಲ್ಲಿ ಹಬ್ಬದ ವಾತಾವರವಿದ್ದು, ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಂತಹ ಇ ಕಾಮರ್ಸ್ ಕಂಪನಿಗಳು ಎಲ್ಲಾ ಉತನ್ನಗಳನ್ನು ರಿಯಾಯತಿ ದರದಲ್ಲಿ ಮಾರುತ್ತಿದ್ದು, ಈ ಕಂಪನಿಗಳ ಮೂಲಕ ಉತ್ಪನ್ನಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ ಉತ್ಪನ್ನಗಳ ಬದಲಿಗೆ ಡಿಟರ್ಜೆಂಟ್ ಸೂಪುಗಳು, ಕಲ್ಲು, ಬಟಾಟೆ ಮುಂತಾದ ವಸ್ತುಗಳು ಪೂರೈಕೆಯಾಗುತ್ತಿವೆ ಎಂದು ಮಾಧ್ಯಮ ವರದಿಗಳಾಗಿವೆ. ಮುಂಬೈನ ಸಯನ್ ನಿವಾಸಿಯೊಬ್ಬರು ಇತ್ತೀಚೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ರೂ 54,999 ಮೌಲ್ಯದ ವನ್ ಪ್ಲಸ್ 10ಟಿ 5ಜಿ ಸ್ಮಾರ್ಟ್ ಫೋನ್ ಅನ್ನು ಆರ್ಡರ್ […]