ಮೀನುಗಾರಿಕಾ ಬೋಟ್ ದುರಂತ: ಆರು ಮಂದಿ ನಾಪತ್ತೆ
ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಳಾರದ ಶ್ರೀರಕ್ಷಾ ಮೀನುಗಾರಿಕಾ ಬೋಟ್ ಸಮುದ್ರದ ದುರಂತಕ್ಕೀಡಾಗಿದ್ದು, ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಬೋಟ್‌ನಲ್ಲಿ 20 ಮೀನುಗಾರರಿದ್ದರು. ದುರಂತ ನಡೆದ ಬಳಿಕ 16 ಮಂದಿ ಡಿಂಗಿಯಲ್ಲಿ ಕುಳಿತು ದಡ ಸೇರಿದ್ದಾರೆ. ಉಳಿದ 6 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಕರಾವಳಿ ಕಾವಲು ಪಡೆಯ ಅಧಿಕಾರಿಗಳ ತಂಡ ಶೋಧ ಕಾರ್ಯ ಆರಂಭಿಸಿದೆ. ಬೋಟ್‌ನಲ್ಲಿ ಮೀನು ಲೋಡ್ ಅಧಿಕವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.ಆದರೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.