ಮಂದಾರ್ತಿ: ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ

ಮಂದಾರ್ತಿ: ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿ. ಪ್ರಾ. ಸ. ಸಂಘವು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದ್ದು, ಮೀನುಗಾರರ ಸಹಕಾರಿ ಸಂಘವು ಮಾದರಿ ಆರ್ಥಿಕ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು. ಅವರು ಶುಕ್ರವಾರ ಮಂದಾರ್ತಿ ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿವಿಧೋದ್ದೇಶ ಪ್ರಾಥಮಿಕ ಸಹಕಾರಿ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಘದ ಭದ್ರತಾ ಕೊಠಡಿಯನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿ ಹಾಗೂ ಕಂಪ್ಯೂಟರ್ ಅನ್ನು ‌ ಉದ್ಯಮಿ ಗಣೇಶ್ ಪ್ರಸಾದ್‌ ಕಾಂಚನ್ […]