ಮರವಂತೆಯಲ್ಲಿ ಮೀನುಗಾರಿಕೆ ತೆರಳಿದ ನಾಡದೋಣಿ ದುರಂತ: ಓರ್ವ ಮೀನುಗಾರನಿಗೆ ಗಾಯ

ಬೈಂದೂರು: ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಬೈಂದೂರು ತಾಲ್ಲೂಕಿನ ಮರವಂತೆ ಬಳಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದಿದ್ದು, ಓರ್ವ ಮೀನುಗಾರ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ದೋಣಿ ಮಾಲೀಕ ಗಂಗೊಳ್ಳಿಯ ಶ್ರೀನಿವಾಸ್ ಖಾರ್ವಿ(50) ಅವಘಡದಲ್ಲಿ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲೆಗಳ ಅಬ್ಬರಕ್ಕೆ ದೋಣಿ ದಿಬ್ಬಕ್ಕೆ ಅಪ್ಪಳಿಸಿದ್ದು, ಇದರಿಂದ ದೋಣಿಯ ಎರಡು ಇಂಜಿನ್ ಗಳು ಸಮುದ್ರ ಪಾಲಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.