ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಅಡಿಲೇಡ್: ಆಸ್ಟ್ರೇಲಿಯಾ ತಂಡದ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡವು ಮೊದಲನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಕೊಹ್ಲಿ ಪಡೆ 21.2 ಓವರ್‌ಗಳಿಗೆ ಕೇವಲ 36 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ 90 ರನ್‌ ಗುರಿ ನೀಡಿತು. ಜಾಶ್‌ ಹೇಝಲ್‌ವುಡ್‌(8ಕ್ಕೆ5) ಹಾಗೂ ಪ್ಯಾಟ್‌ ಕಮಿನ್ಸ್ (24ಕ್ಕೆ 4 ) ಅವರ ಮಾರಕ ದಾಳಿ ನಡೆಸಿದರು. ಮಯಾಂಕ್‌ ಅಗರ್ವಾಲ್‌ 9 ರನ್‌, ವಿರಾಟ್‌ […]