125 ಡಿ.ಬಿಗಿಂತ ಅಧಿಕ ಶಬ್ದವನ್ನುಂಟುಮಾಡುವ ಸುಡುಮದ್ದುಗಳ ಬಳಕೆ ನಿಷೇಧ
ಉಡುಪಿ: ಕೇಂದ್ರ ಸರ್ಕಾರವು ಜೋಡಿಸಲಾದ ಸುಡುಮದ್ದುಗಳನ್ನೊಳಗೊಂಡ (ಗಾರ್ಲ್ಯಾಂಡ್) 125 ಡಿ.ಬಿ (ಎ1) ಗಿಂತ ಹೆಚ್ಚು ಮಟ್ಟದಲ್ಲಿ ಶಬ್ದವನ್ನು ಉಂಟು ಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದ್ದು, ಇಂತಹ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯು ಕಾನೂನು ಬಾಹಿರವಾಗಿರುತ್ತದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೀಪಾವಳಿ ಹಬ್ಬದ ಆಚರಣೆ ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷತೆಗಾಗಿ ಈ ಕೆಳಗಿನಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸುಡುಮದ್ದನ್ನು ಲೈಸೆನ್ಸ್ ಹೊಂದಿರುವ ವಿಶ್ವಾಸಾರ್ಹ ಮರಾಟಗಾರರಿಂದ ಖರೀದಿಸಬೇಕು, ಸುಡುಮದ್ದುಗಳ ಬಳಕೆಯನ್ನು […]
ಹಾವೇರಿ: ಪಟಾಕಿ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ; ಮೂವರು ಸಜೀವ ದಹನ
ಹಾವೇರಿ: ಜಿಲ್ಲೆಯ ಪಟಾಕಿ ಗೋದಾಮಿನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡು ಮೂರು ಜನ ಸಾವನ್ನಪ್ಪಿದ್ದಾರೆ. ಮೂವರು ಮೃತರು ಗೋದಾಮಿನೊಳಗೆ ಸಂಪೂರ್ಣವಾಗಿ ಸುಟ್ಟುಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಜಿಲ್ಲೆಯ ಹಾವೇರಿ-ಹಾನಗಲ್ ಮುಖ್ಯರಸ್ತೆಯ ಆಲದಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರ ಗುರುತು ಇನ್ನೂ ಬಹಿರಂಗವಾಗಿಲ್ಲ, ಆದರೆ ಅವರೆಲ್ಲರೂ ಹಾವೇರಿ ಮೂಲದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗೋದಾಮಿನಲ್ಲಿ ಪಟಾಕಿ ತಯಾರಿಸುವ ಕಾರ್ಯ ಭರದಿಂದ ಸಾಗಿತ್ತು. ಬೆಂಕಿ ತಗಲಲು […]