ಮುಳುವಾಯಿತು ಗಾಂಜಾ ಕುರಿತ ಹೇಳಿಕೆ: ನಟಿ ನಿವೇದಿತಾ ವಿರುದ್ಧ ಎಫ್ ಐಆರ್ ದಾಖಲು
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಅಂಟಿರುವ ಡ್ರಗ್ಸ್ ಜಾಲದ ನಂಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಸಿಬಿ ಪೊಲೀಸರ ತನಿಖೆ ಚುರುಕು ಪಡೆಯುತ್ತಿದ್ದಂತೆ ಚಂದನವನದ ಒಬ್ಬೊಬ್ಬರೇ ನಟಿಮಣಿಯರ ಡ್ರಗ್ಸ್ ನಶೆ ಇಳಿಯುತ್ತಿದೆ. ಇದೀಗ ಮತ್ತೊಬ್ಬ ನಟಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಎರಡು ದಿನಗಳ ಹಿಂದೆ ಗಾಂಜಾ ತುಳಸಿಯಷ್ಟೇ ಶ್ರೇಷ್ಠ ಎಂದು ಹೇಳಿಕೆ ನೀಡಿದ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗಾಂಜಾದಲ್ಲಿ ಔಷಧಿಯ ಗುಣವಿದೆ. ಅದು ತುಳಸಿಯಷ್ಟೇ ಶ್ರೇಷ್ಠ ಎಂಬುದಾಗಿ ನಟಿ ನಿವೇದಿತಾ ಹೇಳಿಕೆ […]