ಗದ್ದೆಯಲ್ಲಿ ಕಂತೆ ಕಂತೆ ನೋಟು ಪತ್ತೆ: ಅಚ್ಚರಿಗೊಂಡ ಗ್ರಾಮಸ್ಥರು

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಬುಕ್ಲೂರಹಳ್ಳಿಯ ಜಮೀನು ಒಂದರಲ್ಲಿ ಎರಡು ಸಾವಿರ, ನೂರು ಹಾಗೂ ಐವತ್ತು ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಇದು ಗ್ರಾಮಸ್ಥರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಕಂತೆ ಕಂತೆ ಹಣ ನೋಡಿದ ಜನರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ತೆಗೆದುಕೊಂಡರೆ ಮುಂದೆ ಏನಾದರೂ ಸಮಸ್ಯೆ ಆಗಬಹುದೆಂಬ ಕಾರಣಕ್ಕಾಗಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಣದ ಪರಿಶೀಲನೆ ನಡೆಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಕಳವು ಹಣ.? ಇಲ್ಲಿನ ಬುಕ್ಲೂರಹಳ್ಳಿ […]