ರಾಕೆಟ್ರಿ: ದ ನಂಬಿ ಎಫೆಕ್ಟ್: ಪ್ರಖ್ಯಾತ ವಿಜ್ಞಾನಿ ನಂಬಿ ನಾರಾಯಣನ್ ರಂತೆ ಕಾಣಿಸಿಕೊಳ್ಳಲು ದವಡೆ ಮುರಿದುಕೊಂಡ ಆರ್ ಮಾಧವನ್

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಆರ್ ಮಾಧವನ್ ನಟಿಸಿ, ಚಿತ್ರಕಥೆ ಬರೆದು ನಿರ್ದೇಶಿಸಿರುವ ರಾಕೆಟ್ರಿ: ದ ನಂಬಿ ಎಫೆಕ್ಟ್ ಚಿತ್ರವು ಜುಲೈ 1ರಂದು ಬಿಡುಗಡೆ ಕಾಣುತ್ತಿದೆ. ಪ್ರಖ್ಯಾತ ವಿಜ್ಞಾನಿ ನಂಬಿ ನಾರಾಯಣನ್ ಬಯೋಪಿಕ್ ಇದಾಗಿದ್ದು, ಇದರಲ್ಲಿ ನಂಬಿ ನಾರಾಯಣನ್ ಅವರ ಪಾತ್ರವನ್ನು ಆರ್ ಮಾಧವನ್ ಮಾಡುತ್ತಿದ್ದಾರೆ. ಈ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಮಾಧವನ್, ನಂಬಿ ನಾರಾಯಣನ್ ಅವರಂತೆ ಕಾಣಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ತನ್ನ ಹಲ್ಲುಗಳು ನಂಬಿ ನಾರಾಯಣನ್ ಅವರಂತೆ ಕಾಣಿಸಿಕೊಳ್ಳಬೇಕೆಂದು ತನ್ನ ದವಡೆಗಳನ್ನು ಮುರಿಸಿಕೊಂಡಿದ್ದೆ […]