ಮಂಗಳೂರು: ತೀವ್ರ ಜ್ವರ ಹಿನ್ನೆಲೆ ಇಬ್ಬರು ಮಕ್ಕಳು ಸಾವು

ಮಂಗಳೂರು: ತೀವ್ರ ಜ್ವರದ ಹಿನ್ನೆಲೆಯಲ್ಲಿ ಇಬ್ಬರು‌ ಮಕ್ಕಳು‌ ಮೃತಪಟ್ಟಿರುವ ಘಟನೆ ಕಾಸರಗೋಡಿನಲ್ಲಿ ಸಂಭವಿಸಿದೆ. ಕಾಸರಗೋಡು ಸಮೀಪದ ಬದಿಯಡ್ಕ ಕನ್ಯಪ್ಪಾಡಿಯ ಸಿಧಾರುತ್ತಲ್ ಮುಂತಾಹ್(8) ಮತ್ತು 6 ತಿಂಗಳ ಮಗು ಸಿನಾಸ್ ಮೃತಪಟ್ಟ ಕಂದಮ್ಮಗಳು. ಕೆಲವು ದಿನಗಳಿಂದ ಈ ಇಬ್ಬರು ಪುಟಾಣಿಗಳು ತೀವ್ರ ಜ್ವರ ಪೀಡಿತರಾಗಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುಟಾಣಿಗಳು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ವೈದ್ಯಕೀಯ ತಂಡವು ಆಸ್ಪತ್ರೆಗೆ ಭೇಟಿ ನೀಡಿ ರೋಗ ಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಸಿದೆ.