ಕೇರಳದಲ್ಲಿ ಟೊಮೇಟೊ ಜ್ವರ ಪತ್ತೆ: ಐದು ವರ್ಷ ಕೆಳಗಿನ ಮಕ್ಕಳಲ್ಲಿ ಹೆಚ್ಚಿದ ಸೋಂಕು

ಕೊಯಂಬತ್ತೂರು: ಕೇರಳದ ಹಲವಾರು ಭಾಗಗಳಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ. ಟೊಮೆಟೊ ಜ್ವರ ಅಥವಾ ಟೊಮೆಟೋ ಫ್ಲೂ ಎಂದು ಗುರುತಿಸಲಾಗುವ ಈ ಅಪರೂಪದ ವೈರಲ್ ಕಾಯಿಲೆಯು ಮಕ್ಕಳಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ರಾಜ್ಯದಲ್ಲಿ ಇದುವರೆಗೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿಸಿದೆ ಎಂದು ಪಿಟಿಐ ವರದಿ ಮಾಡಿದೆ. ವರದಿಯ ಪ್ರಕಾರ, ಈ ಸಂಖ್ಯೆ ಮತ್ತಷ್ಟು ಏರುವ ಮುನ್ಸೂಚನೆಗಳಿವೆ. ರೋಗ ಲಕ್ಷಣಗಳು: # ಟೊಮೆಟೊ ಫ್ಲೂ ಪತ್ತೆ ಹಚ್ಚಲಾಗದ ಜ್ವರವಾಗಿದ್ದು, ಐದು ವರ್ಷಕ್ಕಿಂತ ಕಡಿಮೆ […]