ಕಾಡುವ ಅಪ್ಪನ ಕುರಿತು ವಿಶ್ವಪ್ರಕಾಶ ಮಲಗೊಂಡ ಬರೆದ ಆಪ್ತ ಸಾಲುಗಳು

ಅ ಮ್ಮನ ಕಂಬನಿ ಕಂಡಷ್ಟು ನಮಗೆ, ಅಪ್ಪನ ಬೆವರಹನಿ ಕಾಣುವುದೇ ಇಲ್ಲ..! ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು ! ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ ! ಅಪ್ಪ ಅತ್ತಿದ್ದು ಕಂಡವರು ಕಡಿಮೆ ! ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ ! ಹಬ್ಬ ಸಂತಸಗಳಲಿ ರೇಷ್ಮೆಸೀರೆ ಹೊಸಬಟ್ಟೆ ತೊಡಿಸಿ ಸಂಭ್ರಮಿಸುವ ಅಪ್ಪನುಡುಗೆ ಗಮನಿಸಿದವರಾರು?! ಧರೆಯ ನಿತ್ಯ ಪೊರೆವ ಅಂಬರದಂತೆ ತಂದೆ ಸತಿಸುತರ ಹಗಲಿರುಳು ಕಾಯ್ವ ವಾತ್ಸಲ್ಯಧಾರೆ ! ಅಮ್ಮನ ಮಡಿಲಿಂದ ಕೈಹಿಡಿದು ನಮ್ಮನ್ನೆಲ್ಲ ಹೆಗಲಿಗೇರಿಸಿ, ಲೋಕ ತೋರಿಸಿದ ಮಾರ್ಗದರ್ಶಕ […]